ಮಲ್ಲಿಗೆ ದಂಡೆ

Author : ಕಾಪಸೆ ರೇವಪ್ಪ

Pages 163

₹ 12.00




Year of Publication: 1935
Published by: ರಾಮಚಂದರರಾಯರು
Address: ಬೆಳಗಾವಿ

Synopsys

ಜಾನಪದ ಹಾಡುಗಳ ಸಂಗ್ರಹ ಹಲಸಂಗಿ ಗೆಳೆಯರಲ್ಲಿ ಒಬ್ಬರಾಗಿದ್ದ ಕಾಪಸೆ ರೇವಪ್ಪ ಅವರು ಸಂಪಾದಿಸಿದ ಕೃತಿ ಇದು..ಮಧುರಚನ್ನರ ಮುನ್ನುಡಿಯೊಂದಿಗೆ ಇರುವುದು ವಿಶೇಷ. ಈ ಹಾಡುಗಳನ್ನು ಸಂಗ್ರಹಿಸಿ ಕೃತಿಯನ್ನು ರೂಪಿಸುವಲ್ಲಿ ಕಾಪಸೆ ರೇವಪ್ಪನವರ ಶ್ರಮದ ಬಗ್ಗೆ ಮಧುರಚನ್ನರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ ತಮ್ಮ ಮುನ್ನುಡಿಯಲ್ಲಿ. ಇದೊಂದು ಅಪರೂಪದ ಜಾನಪದ ಹಾಡುಗಳ ಸಂಗ್ರಹವೆಂಬುದರಲ್ಲಿ ಎರಡು ಮಾತಿಲ್ಲ.

About the Author

ಕಾಪಸೆ ರೇವಪ್ಪ

ಹಲಸಂಗಿ ಗೆಳಯರಲ್ಲಿ ಕಿರಿಯರು ಕಾಪಸೆ ರೇವಪ್ಪ. ಬಾಲ್ಯದಿಂದಲೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಮಧುರಚನ್ನರ ಕಾವ್ಯ ಅಭಿಮಾನಿಯಾಗಿದ್ದರು. ಅನಂತರ ಅವರು ಜಾನಪದದಂಥ ಕ್ಷೇತ್ರದಲ್ಲಿ ಮಾಡಿದ ಕೆಲಸ ದೊಡ್ಡದು. ನಂದನವನ, ಮಲ್ಲಿಗೆ ದಂಡೆ, ಸನ್ಯಾಸಿ ಅವರ ಪ್ರಮುಖ ಕೃತಿಗಳು.. ...

READ MORE

Related Books