ಹಿರಿಯ ಸಾಹಿತಿ ಡಾ. ಶಕುಂತಲಾ ಸಿದ್ಧರಾಮ ದುರಗಿ ಅವರು ಸಂಪಾದಿತ ಕೃತಿ-ತೊಟ್ಟಿಲ ಪದಗಳು. ಶೀರ್ಷಿಕೆಯೇ ಸೂಚಿಸುವಂತೆ ಜೋಗುಳದ ಹಾಡುಗಳನ್ನು ಸಂಗ್ರಹಿಸಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ರೂಢಿಯಲ್ಲಿದ್ದ, ಈಗ ಅಳಿವಿನಂಚಿನಲ್ಲಿರುವ ಜೋಗುಳ ಪದಗಳನ್ನು ಒಂದು ಕಡೆ ಸೇರಿಸಲಾಗಿದೆ. ಜನಪದ ಸಂಸ್ಕೃತಿಯಲ್ಲಿ ಹುಟ್ಟನ್ನು ಅತಿ ಹೆಚ್ಚು ಸಂಭ್ರಮಿಸುವ ರೂಢಿ, ಅದು ಹಾಡಿನ ಮೂಲಕ ಹೊರ ಹಾಕಲಾಗುತ್ತಿತ್ತು. ಇಂತಹ ಜನನ, ಮಗು, ತೊಟ್ಟಿಲು, ಜೋಗುಳದ ವಿಷಯಾಧರಿಸಿ, 'ಹದಿಮೂರ ದೇಶಿ ಪದಗಳು', 'ಲಾಲಿ ಪದಗಳು', 'ಪೌರಾಣಿಕ-ಚಾರಿತ್ರಿಕ ಪುರುಷರ ಕುರಿತು ರಚನೆಯಾದ ಪದಗಳನ್ನು ಲಾಲಿ ಪದಗಳೆಂದು ಹಾಗೂ ಕೊನೆಯ ಭಾಗದಲ್ಲಿ ನಗೆಚಾಟಿಕೆ ಸೂಸುವ ರಚನೆಗಳನ್ನು ಹಾಸ್ಯಪ್ರಧಾನ ಪದಗಳನ್ನು ಸೇರಿಸಿದ್ದಾರೆ.
ಒಡಪುಗಳು, ಪ್ರಾದೇಶಿಕ ಪದಕೋಶ ಇತ್ಯಾದಿ ಅನುಬಂಧದಲ್ಲಿ ಸೇರಿಸಿ ಪ್ರಸ್ತಾವನೆಯಲ್ಲಿ ಅವುಗಳಿಗೊಂದು ತಾತ್ವಿಕ ಪರಿವೇಷ ಕಟ್ಟಿಕೊಟ್ಟಿದ್ದಾರೆ. ಒಟ್ಟು 78 ಪದಗಳನ್ನು ಸಂಗ್ರಹಿಸಿ, ಅರ್ಥ, ಮೌಲ್ಯ ಇತ್ಯಾದಿ ವಿಸ್ತಾರವಾಗಿ ನೀಡಿ, ವ್ಯಕ್ತಿ ಪರಿಚಯ, ಪ್ರಾದೇಶಿಕ ಪದಕೋಶ, ಗ್ರಂಥ ಋಣ, ಇತ್ಯಾದಿ ನೀಡಿ ಕೃತಿಯ ಮಹತ್ವ ಹೆಚ್ಚಿಸಿದ್ದಾರೆ.
©2024 Book Brahma Private Limited.