ಸಾಹಿತಿ ಡಾ. ಬಸವರಾಜ ಮಲಶೆಟ್ಟಿ ಅವರು ಸಂಗ್ರಹಿಸಿದ ಕೋಲಾಟದ ಹಾಡುಗಳ ಕೃತಿ ಇದು. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹಿಸಿದ ಕೋಲು ಪದಗಳ ಸಂಕಲನ. ಕೋಲು ಪದಗಳ ವೈಶಿಷ್ಟ್ಯವೆಂದರೆ-ಪಲ್ಲವಿ, ಅನುಪಲ್ಲವಿ, ಪ್ರಾಸ, ಲಯ ಎಲ್ಲವೂ ಹಾಡುಗಳಲ್ಲಿ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಕೋಲು ಕೊಡುವ ಕ್ರಿಯೆಗೆ ಹೊಂದಿಕೊಂಡು ಆಟಗಾರರಿಗೆ ಹುಮ್ಮಸ್ಸು ಬರಿಸುವುದರಿಂದಲೂ ಕೇಳುಗರಿಗೆ ಸಂತಸ ನೀಡುತ್ತವೆ. ದೈವ ಪ್ರಣಯ, ಹಾಸ್ಯ ವಿಡಂಬನೆಗಳು ಸೇರಿ 100ಕ್ಕೂ ಅಧಿಕ ಹಾಡುಗಳು ಸೇರ್ಪಡೆಯಾಗಿವೆ. ಪ್ರಾದೇಶಿಕ ಭಾಷೆಯ ವೈಶಿಷ್ಟ್ಯ ಮತ್ತು ಕೋಲಾಟದ ಸಾಹಿತ್ಯಕ ಅಂಶಗಳನ್ನು ಅಧ್ಯಯನ ಮಾಡುವವರಿಗೆ ಈ ಕೃತಿ ತುಂಬಾ ಉಪಯುಕ್ತ ಎಂದು ಸಾಹಿತಿ ಹಂಪ ನಾಗರಾಜಯ್ಯ ಅವರು ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.