ಸಂಶೋಧಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ಬರೆದ ಕೃತಿ ಸುವ್ವೆ...ಸುವ್ವೆ...ಸುವ್ವಾಲಿ. ಅಕ್ಷರ ಅರಿಯದ ಅನುಭವದ ನೆಲೆಯಲ್ಲಿ ಬಂದಿರುವ ಜಾನಪದ ಹಾಡುಗಳು ಬೆಟ್ಟದಷ್ಟು.ಜನಪದರ ಜೀವನ ವಿಧಾನ , ಜೀವನ ಸಂಘರ್ಷ, ಪ್ರೀತಿ ಸಂತೋಷ ಮಾನವೀಯತೆಯನ್ನು ನೇರ ನಿಷ್ಠುರವಾಗಿ ಕಾವ್ಯಗಳ ಮೂಲಕ ವಿವರಿಸುವ ಜಾನಪದ ಹಾಡುಗಳು,ಜನಪದರಷ್ಟೇ ..ಜಾನಪದ ಹಾಡುಗಳನ್ನು ಹಿರಿಯರಿಂದ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ ಪ್ರಯತ್ನಇಲ್ಲಿಯದು.
ಬಳ್ಳಾರಿ ಜಿಲ್ಲೆಯ ಜಾನಪದ ಹಾಡುಗಾರ್ತಿಯರಿಂದ ಸಾಹಿತ್ಯ ಸಂಗ್ರಹಿಸಲಾಗಿದೆ.ಗಡಿ ಭಾಗದಲ್ಲಿ ಪ್ರಸಿದ್ಧಿ ಹೊಂದಿರುವ ಗೌರಮ್ಮನ ಪದಗಳು ಹಾಗೂ ಜೀವನ ವ್ರತದ ಆಚರಣೆಗಳ ಸಂಗ್ರಹಣೆ ಈ ಕೃತಿಯ ವಿಶೇಷವಾಗಿದೆ. ಜಾನಪದ ಹಾಡುಗಳು ಹಿನ್ನೆಲೆಯಲ್ಲಿ ಮಹಿಳಾ ಪಾತ್ರ , ಗೌರಮ್ಮನ ಪದಗಳು, .ಜೋಗುಳ ಪದಗಳು, ಮೈನೆರೆದ ಪದಗಳು, ಸೋಬಾನೆ ಪದಗಳು, ಬೀಸುವ ಪದಗಳು ಹಾಗೂ .ಮಂಗಳಾರತಿ ಪದಗಳು ಒಳಗೊಂಡಿವೆ.
ಕೃತಿಯ ಬೆನ್ನುಡಿಯಲ್ಲಿ ಡಾ. ಎಸ್. ಮೋಹನ್ ಅವರು ‘ಸಾಂಪ್ರದಾಯಿಕ ಆಚರಣೆಗಳು ಜಾನಪದೀಯ ಮಹಿಳೆಯರ ಜೀವನದ ಭಾಗವೇ ಆಗಿದ್ದವು. ಅವುಗಳನ್ನು ಸಂಗ್ರಹಿಸಿ, ಪರಿಶೀಲಿಸಿ, ಸಂಪಾದಿಸಿದ್ದು, ಜಾನಪದೀಯ ಮಹಿಳೆಯರ ಅಪಾರ ಜ್ಞಾನಭಂಡಾರವನ್ನು ಈ ಕೃತಿ ಒಳಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
ಇಂದು ಆಧುನಿಕತೆ ಪ್ರಭಾವದಿಂದ ಆಚರಣೆಗಳು ಸಂಪ್ರದಾಯಗಳು ಹಲವಾರು ರೀತಿಯಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಇಂದಿನ ಸಮಾಜದಲ್ಲಿ ಹೇಗೆ ಪ್ರತಿನಿಧಿಸುತ್ತದೆ ಎಂಬ ಸತ್ಯ ತಿಳಿಯುವ ಉದ್ದೇಶ ಈ ಕೃತಿಯದ್ದು ಎಂದು ಲೇಖಕಿ ಹೇಳಿಕೊಂಡಿದ್ದಾರೆ.
©2024 Book Brahma Private Limited.