ಚಿಂತಕಿ ಡಾ. ಎ.ಎಸ್. ಸಿದ್ದೇಶ್ವರಿ ಅವರ ಜಾನಪದ ಹಾಡುಗಳ ಕೃತಿ-ಜಾನಪದ ಹೂಬನ. ಜಾನಪದ ಹಾಡುಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಬಳ್ಳಾರಿ ಗಡಿ ಭಾಗದಲ್ಲಿ ಚಾಲ್ತಿಯಲ್ಲಿರಿಉವ ಜಾನಪದ ಗೀತೆಗಳನ್ನು ಸಂಗ್ರಹಿಸಲಾಗಿದೆ. ಅಂತರಂಗದ ಹಾಡುಗಳು, ಹಾಸ್ಯದ ಹಾಡುಗಳು, ದೇವರ ಹಾಡುಗಳು ಹಾಗೂ ಇತರೆ ಹಾಡುಗಳು-ಒಟ್ಟು ವಿಷಯ ವಸ್ತುವನ್ನು ವಿಭಾಗಿಸಿ ಅಧ್ಯಯನಕ್ಕೂ ಯೋಗ್ಯವಾಗಿಸಿದೆ. ಮಾತ್ರವಲ್ಲ; ಆಧುನಿಕತೆಯ ಈ ಕಾಲದಲ್ಲಿ ಕೃತಿಯ ಪ್ರಾತಿನಿಧ್ಯವನ್ನು ಸಹ ಚರ್ಚಿಸಲಾಗಿದೆ.
ಸಾಹಿತಿ ಡಾ. ಜಾಜಿ ದೇವೇಂದ್ರಪ್ಪ ಅವರು ಬರೆದ ಮುನ್ನುಡಿಯಲ್ಲಿ ‘ನಮ್ಮ ಮೂಲ ಸಾಂಸ್ಕೃತಿಕ ಅಸ್ಮಿತೆ ಇರುವುದು ಜಾನಪದ ಸಾಹಿತ್ಯ ಹಾಗೂ ಹಾಡುಗಳಲ್ಲಿ. ಇವು, ಗ್ರಾಮ ನಾಮ, ಸ್ಥಳನಾಮ, ಆಚರಣೆಗಳು, ಅವುಗಳ ಮಹತ್ವ ತಿಳಿಯಲು ಮೂಲ ಸಂಪನ್ಮೂಲಗಳು. ಈ ಹಾಡುಗಳಲ್ಲಿ ಬಂಡಾಯ ಮನೋಭಾವವೂ ಇರುವುದನ್ನು ಗುರುತಿಸಬಹುದು. ಜಾನಪದ ಹಾಡುಗಳ ಸಂಗ್ರಹ, ಸಂಪಾದನೆ, ಶೋಧನೆಯ ಫಲವಾಗಿ ಜಾನಪದ ಎಂಬ ಶಬ್ದ ಸಂಪತ್ತು ಕೃತಿಯಲ್ಲಿ ಅನಾವರಣಗೊಂಡಿದೆ. ಸ್ತ್ರಿವಾದಿ ನೆಲೆಯಲ್ಲಿ ಜಾನಪದ ಹಾಡು- ಸಾಹಿತ್ಯ ವಿಶ್ಲೇಷಣೆಯೆಡೆಗೆ ಹೆಚ್ಚು ಒಲವು ತೋರಿದ್ದನ್ನು ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ..
©2024 Book Brahma Private Limited.