ಕಂಸಾಳೆಯವರನ್ನು ‘ಮಾದೇಶ್ವರನ ಗುಡ್ಡರು’ ‘ದೇವರಗುಡ್ಡರು’ ‘ಸಿರಿಯ ದೇವರಗುಡ್ಡರು’ ಎಂಬೆಲ್ಲ ಹೆಸರಿನಿಂದ ಕರೆಯುತ್ತಾರೆ. ಗುಡ್ಡ ಎಂದರೆ ಮಾದೇಶ್ವರ ಭಕ್ತ ಅಥವಾ ಮಾದೇಶ್ವರ ಶಿಶು ಮಗ. ಗುಡ್ಡನನ್ನು ಬಿಡುವ ಪದ್ಧತಿಯು ಕಂಸಾಳೆಯವರ ಆಚರಣೆಗಳಲ್ಲಿ ವಿಶಿಷ್ಟವಾದುದು.
ದೇವರಗುಡ್ಡರ ಕಾವ್ಯಗಳು (ಕಂಸಾಳೆ ಪದಗಳು) ಕೃತಿಯು ಕಂಸಾಳೆ ಹಾಡುಗಳನ್ನು ವಿವರಿಸುತ್ತದೆ. ಜನಪದ ಮಹಾಕಾವ್ಯ ‘ಮಲೆಯ ಮಾದೇಶ್ವರ’ದಿಂದ ಆಯ್ದ ಭಾಗಗಳು, ದುಂಡಮ್ಮನ ಸಾಲು, ಲವಕುಶರ ಕಾಳಗ, ನೀಲವೇಣಿ, ಲಿಂಗರಾಜಮ್ಮ, ಮೈದಾಳ ರಾಮಣ್ಣ ಕುರಿತು ಸಂಪೂರ್ಣ ಮಾಹಿತಿ ಕೃತಿಯಲ್ಲಿದೆ. ಪಿ.ಕೆ. ರಾಜಶೇಖರ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.