ಜಾನಪದ ತಜ್ಞ ಡಾ. ಎಚ್.ಎಲ್. ನಾಗೇಗೌಡ ಅವರು ಜಾನಪದೀಯ ವಿಶೆಷವಾಗಿ ಹಾಡುಗಳನ್ನು ಸಂಗ್ರಹಿಸಿ ಅವುಗಳ ಮೂಲರೂಪದಲ್ಲಿಡಲು ತೋರಿದ ಕಳಕಳಿಯೇ ಈ ಕೃತಿ. ತಾವು ವೃತ್ತಿಯ ಭಾಗವಾಗಿ ರಾಜ್ಯದ ವಿವಿಧೆಡೆ ಸಂಚರಿಸುತ್ತಿದ್ದಾಗ ಗ್ರಾಮೀಣ ವಿಶೇಷವಾಗಿ ಮಹಿಳೆಯರಿಂದ ಹಾಡುಗಳನ್ನು ಹಾಡಿಸಿ, ರೆಕಾರ್ಡ್ ಮಾಡಿಕೊಂಡು ದಾಖಲಿಸಿದ್ದರ ಫಲವೇ ಕೃತಿಯಾಗಿ ರೂಪು ತಳೆದಿದೆ. ಕ್ಯಾಸೆಟ್ ಗಳನ್ನು ಕೇಳಿದವರಿಗೆ ಹಾಡಿನ ಧಾಟಿಯೇನೋ ತಿಳಿಯುತ್ತದೆ. ಆದರೆ, ಸಾಹಿತ್ಯ ಸ್ಪಷ್ಟವಾಗಿ ಅರ್ಥವಾಗದೇ ಹೋಗಬಹುದು. ಆದ್ದರಿಂದ, ಹಾಡುಗಳ ಸಾಹಿತ್ಯದ ಅರ್ಥ ಬರೆದಿದ್ದು, ಓದಗರಿಗೆ ಅನುಕೂಲ ಕಲ್ಪಿಸಿದ್ದು ಕೃತಿಯ ಹೆಗ್ಗಳಿಕೆ.
ಅಳೂಬ್ಯಾಡ ಪುಟ್ಟರಾಜು, ಬಳೂಕೂತ ಬೀದಿ ಮೆರೆದಾಳು, ತಿಂಗುತಿಂಗಳಿಗೂ ತಿಂಗಳಿಗೂ ಮಾಮನ ಪೂಜೆ, ಹೂವ್ವ ಕುಯ್ಯನಿ ಬನ್ನಿ, ಸುವ್ ವಕ್ಯಾ ಸುವ್ವನಾರೀ ಹಾಕ ವಯ್ಯಾರಿ, ಸೋಬಾನ ಬನ್ನಿರೇ, ಸೋಬಾನೆಂಬುದು ಶಿವನೀಗೆ, ಇಲ್ಲಿ ಕೇಳಾರಿ ನಮ್ಮ ಹಾಡ ಹೀಗೆ ಒಟ್ಟು 12 ಅಧ್ಯಾಯಗಳಡಿ ಜಾನಪದೀಯ ಹಾಡುಗಳ ಸಾಹಿತ್ಯದ ಅರ್ಥವನ್ನು ಸುಲಭವಾಗಿ ಮಾಡಿಸಿಕೊಡಲಾಗಿದೆ.
©2025 Book Brahma Private Limited.