‘ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಕಥನಗೀತೆಗಳು ಪ್ರಮುಖವಾದ ಆಕರ್ಷಣೆಯನ್ನು ಪಡೆದುಕೊಂಡಿವೆ. ಆದರೆ ಇವುಗಳ ಸಂಗ್ರಹಕಾರ್ಯ ಸಾಕಷ್ಟು ನಡೆಸಿದ್ದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ನಡೆದಿಲ್ಲ. ತ್ಯಾಗ ಬಲಿದಾನಗಳ ಮೂಲನಿಷ್ಠೆಗೆ ಒಳಗಾದ ಈ ಕಥನಗೀತೆಗಳಲ್ಲಿ ಹೆಣ್ಣು ಮಕ್ಕಳಲ್ಲಿ ಮೀಸಲಾದ ವಿಶೇಷ ಕಥಾನಕಗಳು ನಾಯಕಿ ಪ್ರಧಾನವಾದವು. ಶ್ರಮದ ಬದುಕನ್ನು ಸಾಗಿಸುವ ಹಳ್ಳಿಗಾಡಿನ ಸ್ತ್ರೀಯರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹಾಡುವುದನ್ನು ಮೈಗೂಡಿಸಿಕೊಂಡು ಬಂದವರು. ಪ್ರಸ್ತುತ ಕೃತಿಯಲ್ಲಿ ಹಾಡ್ಗೀತೆಗಳು ಸ್ತ್ರೀಯರು ಮಾತ್ರವಲ್ಲದೇ ಪುರುಷರು ಹಾಡುತ್ತಾರೆ ಎಂಬುದಕ್ಕೆ ನಿದರ್ಶನವೂ ಇದೆ’ ಎನ್ನುತ್ತಾರೆ ಲೇಖಕಿ ಜಯಲಕ್ಷ್ಮಿ ಸೀತಾಪುರ. ಈ ಕೃತಿಯು ಜಾನಪದ ಹಾಡ್ಗೀತೆಗಳು, ಅದರ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದೆ.
©2024 Book Brahma Private Limited.