‘ಜೀವನ ಜೋಕಾಲಿ’ ಕೃತಿಯು ಎಂ.ಎಸ್. ಸುಂಕಾಪುರ ಅವರು ಸಂಪಾದಿತ ಜೋಗತಿ ಹಾಡುಗಳಾಗಿವೆ. ಈ ಜೋಗತಿಯ ಹಾಡುಗಳಲ್ಲಿ ಧಾಟಿ ಮಹತ್ವಪೂರ್ಣವಾದದ್ದು. ಆ ಧಾಟಿಯನ್ನು ಹಿಡಿದು ಅವರು ಹೇಳಬೇಕಾದುದರಲ್ಲಿ ಬೇಕಾದ ವ್ಯತ್ಯಾಸ ಮಾಡಿಕೊಳ್ಳುವವರು. ರಾಗ, ರಸ, ಪದ, ಕಸ ಎನ್ನುವ ವಿಚಾರವನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಈ ಹಾಡುಗಳಲ್ಲಿ ಸಾಹಿತ್ಯಿಕ ಅಂಶ ಕಡಿಮೆಯೆಂದೇ ಹೇಳಬೇಕು. ವಿಷಯ ವೈವಿಧ್ಯವೂ ಅಷ್ಟಕಷ್ಟೇ. ಎಲ್ಲಮ್ಮ ಹಾಗೂ ಅವಳ ಪರಿವಾರವನ್ನು ಬಿಟ್ಟು ಹಾಡಿನ ವಿಷಯ ಆಕಡೆ ಹೋಗುವುದೇ ಇಲ್ಲ. ಸರಳವಾದ ನೇರ ನಿರೂಪಣೆಯೇ ಈ ಹಾಡುಗಳ ಜೀವಾಳ. ಇಲ್ಲಿ ಪ್ರಾಸಾನುಪ್ರಾಸ ಕೆಲವು ಕಡೆ ತೋರಿ ಬರುತ್ತದೆ. ಎಲ್ಲ ಹಾಡುಗಳು ಸಾಮಾನ್ಯವಾಗಿ ಅಂಶಗಣದ ಮೇಲೆ ಅವಲಂಬಿಸಿ ನಿರ್ಮಾಣಗೊಂಡಿವೆ ಎಂದು ಸಂಪಾದಕರು ಅಭಿಪ್ರಾಯಪಡುತ್ತಾರೆ.
©2024 Book Brahma Private Limited.