ಪ್ರಸ್ತುತ ಸಂಪುಟದಲ್ಲಿರುವ ಹವ್ಯಕ ಭಾಷೆಯ 64 ಜನಪದ ಕತೆಗಳು ಪ್ರಕಟವಾಗುವ ಹೊತ್ತಿಗೆ ಸರಿಯಾಗಿ, ನಾವೆಲ್ಲ ಕುತೂಹಲದಿಂದ ಕಾಯುತ್ತಿದ್ದ 2011ರ ಭಾರತೀಯ ಜನಗಣತಿಯ ವಿವರಗಳೂ ಪ್ರಕಟವಾಗಿವೆ. ಈ ಜನಗಣತಿಯಲ್ಲಿರುವ ಭಾಷಾ ಸಂಬಂಧಿ ವಿಚಾರಗಳನ್ನು ಗಮನಿಸಿದರೆ ಹಿರಿಯ ಜಾನಪದ ತಜ್ಞೆ ಶಾಂತಿ ನಾಯಕರ ಈ ಕೆಲಸದ ಮಹತ್ವ ತಾನೇ ತಾನಾಗಿ ಸ್ಪಷ್ಟವಾಗುತ್ತದೆ. ಶಾಂತಿ ನಾಯಕ್ ಸಂಪಾದಿಸಿರುವ ಪ್ರಸ್ತುತ ಪುಸ್ತಕಕ್ಕೆ ವಿಶೇಷ ಮಹತ್ವವಿದೆ. ಈ ಪುಸ್ತಕದ ಮೂಲಕ ಅವರು ಹವ್ಯಕ ಭಾಷೆಯ ಪದ ಸಂಪತ್ತು, ನಿರೂಪಣಾ ವಿಧಾನ, ವ್ಯಾಕರಣ ಕೆಲವು ಗುಣಗಳು, ಪ್ರಾದೇಶಿಕ ಪ್ರಬೇಧಗಳು-ಇತ್ಯಾದಿ ಸಂಗತಿಗಳನ್ನು ಮುನ್ನೆಲೆಗೆ ತಂದಿದ್ದಾರೆ. ಯಾವುದೇ ಭಾಷೆಯ ಸಬಲೀಕರಣಕ್ಕೆ ಇಂಥ ಕೆಲಸಗಳು ನಡೆಯುವುದು ಬಹಳ ಮುಖ್ಯ. ಭಾಷೆಯ ಶ್ರೀಮಂತಿಕೆಯನ್ನು ಸ್ಥಾಪಿಸಲು, ಇತರರಿಗೆ ತೋರಿಸಲು ನಾವೆಲ್ಲ ಇಂಥ ಪುಸ್ತಕಗಳನ್ನೇ ಆಧರಿಸುತ್ತೇವೆ. ಇಂಥ ಮಹತ್ವದ ಕೆಲಸ ಮಾಡಿದ ನಾಯಕರನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.