ಕ್ರೈಸ್ತ ಜನಪದ ಗೀತೆಗಳ ವಸ್ತು ವಿಷಯಗಳೆಂದರೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಆಚಾರಗಳೇ ಆಗಿರುತ್ತವೆ. ತತ್ವಶಾಸ್ತ್ರ ದೈವಶಾಸ್ತ್ರಗಳೇ ಆಗಲಿ ಹೆಚ್ಚಾಗಿ ಪ್ರಸ್ತಾಪಗೊಳ್ಳುವುದಿಲ್ಲ. ಸಾಂಗ್ಯಗಳು, ಆಚಾರಗಳು, ಸಂಪ್ರದಾಯಗಳನ್ನು ಹೇಳುವ ಗೀತೆಗಳು ಹೆಚ್ಚಾಗಿ ದೊರೆಯುತ್ತವೆ. ಅಲ್ಲದೆ, ಸಾಂಸ್ಕೃತಿಕ ವಿಚಾರಗಳೂ ಇರುವ ಗೀತೆಗಳಿದ್ದು, ವಿಷಯ ವ್ಯಾಪ್ತಿಯನ್ನು ವಿಶೇಷವಾಗಿ ಹೆಚ್ಚಿಸಿಕೊಂಡಿವೆ. ಈ ಕೃತಿಯಲ್ಲಿ ಜಾನಪದ ಕ್ರಿಸ್ತಾಯಣ, ಕೋಲುಪದ ಕ್ರಿಸ್ತಾಯಣ ಹಾಗೂ ಕ್ರೈಸ್ತೊದ ಕ್ರಿಸ್ತಾಯಣ ಹೀಗೆ ಮೂರು ಭಾಗಗಳಲ್ಲಿ ಕ್ರೈಸ್ತ ಗೀತೆಗಳು ಒಳಗೊಂಡಿವೆ. ಲೇಖಕ ಬಿ.ಎಸ್. ತಲ್ವಾಡಿ ಅವರು ಸಂಪಾದಿಸಿದ್ದಾರೆ.
©2025 Book Brahma Private Limited.