‘ನೂರು ಜನಪದ ಹಾಡುಗಳು’ ಬೈಲೂರು ಬಸವಲಿಂಗಯ್ಯ ಹಿರೇಮಠ ಅವರ ಕೃತಿ. ಜಾನಪದೀಯ ಕಾವ್ಯಗಳಾದ ಬೀಸುವ ಕಲ್ಲಿನ ಹಾಡುಗಳು, ಚೌಡಿಕಿ ಪದಗಳು, ಗೀಗೀ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು ಗ್ರಾಮೀಣ ಸಾಮಾಜಿಕ-ಸಾಂಸ್ಕೃತಿಕ-ವ್ಯಕ್ತಿಗತ ನಂಬುಗೆಯ -ಹಬ್ಬಬಹರಿದಿನಗಳ ಬದುಕನ್ನು ಕಟ್ಟಿಕೊಡುವ ಸಮೃದ್ಧ ಸಾಹಿತ್ಯದ ಕೃತಿ ಇದು. ವಿಜ್ಞಾನ-ತಂತ್ರಜ್ಞಾನದ ಇಂದಿನ ದಿನಮಾನದಲ್ಲಿ ಜನಪದೀಯ ಸಾಹಿತ್ಯದ ಯಾವುದೇ ಪ್ರಕಾರಗಳ ಸಂರಕ್ಷಣೆ-ಪ್ರೋತ್ಸಾಹದಂತಹ ಕಳಕಳಿಯು ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ನೂರು ಜನಪದ ಹಾಡುಗಳು’ ಉತ್ತಮ ಸಂಗ್ರಹ ಕೃತಿಯಾಗಿದೆ.
©2025 Book Brahma Private Limited.