ನೆಲಪದ (ಹೋರಾಟ ಮತ್ತು ಜನಪರ ಹಾಡುಗಳು)

Author : ಹುರುಗಲವಾಡಿ ರಾಮಯ್ಯ

Pages 128

₹ 100.00




Year of Publication: 2017
Published by: ಜನಕಲಾರಂಗ
Address: ಹುರುಗಲವಾಡಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
Phone: 8970022898

Synopsys

`ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು ತುಂಡು ಭೂಮಿಯಲ್ಲ ಒಂದು ದೇಶವಲ್ಲ ಇಡಿ ಭೂಗೋಳವನೇ ಕೇಳುವೆವು'- ಇಂತಹ ನೂರಾರು ಹಾಡುಗಳ ಸಂಗ್ರಹ ‘ನೆಲದಪದ’. ಜನಪದ, ಸಾಮಾಜಿಕ ಹೋರಾಟ ಹಾಗೂ ಜಾಗೃತಿ ಗೀತೆಗಳ ಸಂಕಲನ ಇದಾಗಿದೆ. ಅಂಬೇಡ್ಕರ್‌ ಕುರಿತ ಅರಿವಿನ ಹಾಡು, ಕುವೆಂಪು ಅವರ ಕವಿತೆಗಳು, ಪರಿಸರದ ಕುರಿತ ಜಾಗೃತಿ ಗೀತೆಗಳು, ಅಕ್ಷರ-ಆರೋಗ್ಯದ ಹಾಡುಗಳು ಇದರಲ್ಲಿವೆ. ಹುರುಗಲವಾಡಿ ರಾಮಯ್ಯನವರು ಈ ಗೀತೆಗಳನ್ನು ಸಂಗ್ರಹಿಸಿದ್ದಾರೆ.

About the Author

ಹುರುಗಲವಾಡಿ ರಾಮಯ್ಯ

ಹಾಡುಗಾರರು, ರಂಗಭೂಮಿ ಕಲಾವಿದರಾದ ಹುರುಗಲವಾಡಿ ರಾಮಯ್ಯ ಅವರು ದಲಿತ, ಕಮ್ಯುನಿಸ್ಟ್‌, ಭಾಷಾ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಜಾನಪದ, ಹೋರಾಟದ ಹಾಗೂ ಸಾಕ್ಷರತಾ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.  ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯರು ಕೂಡ. ಬೀದಿ ನಾಟಕಗಳ ಮೂಲಕ ಜನಪರಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿರು ಇವರು ಹೋರಾಟದ ಹಾಡುಗಳು, ಸೂರು ಸೂರಿನ ದೀಪ, ನೆಲದ ಪದ, ಸಕ್ಕರೆ ಸೀಮೆಯ ನಾಟಕ ಡಿಎಸ್‌ಎಸ್‌ ನಾರಾಯಣ ...

READ MORE

Related Books