ಕರಾವಳಿ ಹಾಗೂ ಮಲೆನಾಡು ಭಾಗದ ಹಾಡ್ಗುಣಿತಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಕೃತಿಯ ವಿಷಯ ವಸ್ತುವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಭಾಗದಲ್ಲಿ ಬಯಲುಸೀಮೆಯ (ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗ) ಕುಣಿತದ ಹಾಡಿನ ಮಾದರಿಗಳನ್ನೊಳಗೊಂಡಿದೆ. ಎರಡನೇ ಭಾಗದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ವಿವಿಧ ಹಾಡ್ಗುಣಿತಗಳನ್ನು ಚಿತ್ರಿಸಲಾಗಿದೆ.
ಈ ಕೃತಿಯು ಕೆಂಬಟ್ಟಿ ಹೊಲೆಯರ ಹಾಡ್ಗುಣಿತಗಳು, ಕೆಂಬಟ್ಟಿಗಳ ಕುಣಿತದ ಹಾಡುಗಳು, ಪನ್ನಾಂಗಾಲತಮ್ಮೆ ಹಾಡು, ನೀಲಮ್ಮ ದೇವಿಯ ಹಾಡು, ನೀಲಿ ದೇವಿಯ ಹಾಡು, ಭದ್ರಕಾಳಿ ದೇವಿಯ ಹಾಡು, ಬೇಡು ಹಬ್ಬದ ಹಾಡು, ಬೇಡುವ ಹಾಡು, ಭದ್ರಕಾಳಿಯ ಸಣ್ಣ ಹಾಡು, ಬೇಡು ಹಬ್ಬದ ಹಾಡು, ಮನೆ ದೇವರ ಹಾಡು, ಉಮ್ಮತ್ತಾಟ್ ಹಾಡು, ಪಂಜಿನ ಹಬ್ಬದ ಹಾಡು, ಎತ್ತು ಹೇರುವ ಹಾಡು, ಹುತ್ತರಿ ಹಬ್ಬದ ಹಾಡು, ಹುತ್ತರಿ ಮನೆ ಹಾಡುವುದು, ಹುತ್ತರಿ ಹಬ್ಬದಲ್ಲಿ ಮನೆ ಹಾಡುವುದು, ಹುತ್ತರಿ ಕೋಲಾಟದ ಹಾಡು, ಹುತ್ತರಿ ಸಮಯದ ಆಟದ ಹಾಡು, ದಕ್ಷಿಣ ಕನ್ನಡ ಜಿಲ್ಲೆಯ ಹಾಡ್ಗುಣಿತಗಳು, ಪಿಲಿ ಪಂಜಿ ಕುಣಿತ, ಕನ್ಯಾಪು ಕುಣಿತ, ಚೆನ್ನು ಕುಣಿತ, ಕರ್‌ಂಗೋಲು ಕುಣಿತ, ಜೋಗಿ ಕುಣಿತ, ಇನ್ನಷ್ಟು ಹಾಡ್ಗುಣಿತಗಳು ಮುಂತಾದ ಹಾಡ್ಗುಣಿತಗಳ ಕುರಿತು ವಿವರಿಸಲಾಗಿದೆ.
©2024 Book Brahma Private Limited.