ಲೇಖಕಿ ಎನ್. ಪ್ರಭಾ ಅವರ ‘ಜನಪದ ಗೀತೆಗಳು’ ಕೃತಿಯು ಹೆಸರೇ ಸೂಚಿಸುವಂತೆ ಜನಪದ ಗೀತೆಗಳ ಸಂಗ್ರಹವಾಗಿದೆ. ಕನ್ನಡದ ಸುಪ್ರಸಿದ್ದ ಜಾನಪದ ಗೀತೆಗಳೆಲ್ಲ ಒಂದೆಡೆ ಸಿಗುವ ಅಪರೂಪದ ಸಂಗ್ರಹ ಇದು. ಜಾನಪದ ಗಾಯಕರು ತಲೆಮಾರುಗಳಿಂದ ತಮ್ಮ ಸಂಸ್ಕೃತಿ ಕಂಠದಲ್ಲಿ ಉಳಿಸಿಕೊಂಡು ಬಂದ ಕನ್ನಡದ ಹಲವು ಬಗೆಯ ಮಟ್ಟುಗಳು ಜೀವಂತ ಧ್ವನಿಯಾಗಿ ಈ ಗೀತೆಗಲ್ಲಿ ಉಳಿಯುತ್ತ ಮೈ ಮನಗಳಿಗೆ ಮುದ ನೀಡುತ್ತವೆ. ದೈವಸ್ತುತಿ, ಸುಗ್ಗಿ, ಮದುವೆ, ಕೋಲಾಟ ಮೊದಲುಗೊಂಡ ಸಂತೋಷದ ರಸನಿಮಿಷಗಳನ್ನು ಕಣ್ಮುಂದೆ ಸುಳಿಸುವ ಗೀತೆಗಳೊಂದಿಗೆ, ದುಃಖದ ನೋವಿನ ಭಾವಸೆಳೆದ ಗೀತೆಗಳೂ ಇಲ್ಲಿವೆ. ಕನ್ನಡ ಜನಪದ ಸಂಸ್ಕೃತಿಯ ಗೀತಸಾಹಿತ್ಯವನ್ನು ತನ್ನೆಲ್ಲ ವೈವಿಧ್ಯತೆಯ ಲಯದೊಂದಿಗೆ ಓದಿನಲ್ಲಿಯೇ ಕಿವಿಗಳಲ್ಲಿ ಕೇಳಿಸುವ ಈ ಗೀತೆಗಳು ಜನಪದ ಗೀತೆಗಳ ಕಣಜವಾಗಿವೆ.
©2024 Book Brahma Private Limited.