‘ಬಯಲು ಸೀಮೆಯ ಲಾವಣಿಗಳು’ ಕೃತಿಯು ಕಾಳೇಗೌಡ ನಾಗವರ ಅವರ ಅಧ್ಯಯನ ಗ್ರಂಥವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಹಾ.ಮಾ ನಾಯಕ ಅವರು, ಜಾನಪದ ಸಾಹಿತ್ಯದ ಬಗೆ, ಭಾಷೆ, ವೈಜ್ಞಾನಿಕತೆ ಹಾಗೂ ಕ್ರಿಯಾತ್ಮಕ ಬಗೆಗಳಿಗೆ ಸಂಬಂಧಿಸಿದಂತೆ ಕತೆ, ಗೀತೆ, ಲಾವಣಿ, ಒಗಟು, ಗಾದೆ, ನಂಬಿಕೆ, ಸಂಪ್ರದಾಯ, ವೈದ್ಯ, ಅಡುಗೆ, ಉಡುಗೆ, ವೃತ್ತಿ, ಮಾಟ, ಮಂತ್ರ, ನೃತ್ಯ, ನಾಟಕ, ಚಿತ್ರ, ಶಿಲ್ಪ, ಆಟ, ಕೂಟ, ನಡೆ, ನುಡಿ ಮುಂತಾದ ಜನಪದ ಜೀವನದ ಎಲ್ಲ ಸ್ತರಗಳನ್ನು ಒಳಗೊಳ್ಳುವ ವಿಸ್ತಾರ, ವೈವಿಧ್ಯದ ಹಿನ್ನೆಲೆಯಲ್ಲಿ ಪರಿಶೋಧನೆ ಸಂರಕ್ಷಣೆಗಳು ಅತ್ಯಂತ ಅವಶ್ಯಕವಾದ ವಿಚಾರವಾಗಿದೆ. ಅಂತಹ ಅವಶ್ಯಕ ವಿಷಯಗಳನ್ನು ಈ ಕೃತಿಯು ಕಟ್ಟಿಕೊಟ್ಟುತ್ತದೆ. ಹಾಗೆಯೇ ಬಯಲು ಸೀಮೆಯಲ್ಲಿ ಪ್ರಚಲಿತವಾಗಿರುವ ಕೆಲವು ಉತ್ತಮ ಲಾವಣಿಗಳನ್ನು ಇಲ್ಲಿ ಹಾಕಿ ಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.