ಬೀಬಿ ಇಂಗಳಗಿ ಹಸನ ಸಾಹೇಬನ ಗೀಗೀ ಪದಗಳು (ಸಂಪುಟ-1)

Author : ಮ.ಗು. ಬಿರಾದಾರ

Pages 320

₹ 50.00




Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಬೀಬಿ ಇಂಗಳಗಿ ಹಸನ ಕವಿಯ ಗೀಗೀ ಪದಗಳನ್ನು ಸಂಪಾದಿಸಿ ಈ ಕೃತಿಯನ್ನು ರಚಿಸಲಾಗಿದೆ. ಬೀಬಿ ಹಾಗೂ ಅವರ ಶಿಷ್ಯಂದಿರ, ಸಾವಿರ ಪುಟದಷ್ಟು ಹಾಡುಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಡಾ.ಎಂ.ಜಿ. ಬಿರಾದಾರ ಮತ್ತು ಡಾ.ಬಿ. ಎಸ್. ಕೋಟ್ಯಾಳ ಕೃತಿಯ ಸಂಪಾದಕರು.

ಸ್ತುತಿ ಮತ್ತು ಹಾಡುಗಾರಿಕೆ: ನಿನಕಿಂತ ನನಗ ಯಾರಿಲ್ಲ ಹೆಚ್ಚಿನ ದೇವತಾ, ಶಕ್ತಿ ಅವತಾರ, ಸಖಿ-3, ಪುಟಾಣಿ ತಿನ್ನು ಹುಡುಗರಿಗೆಲ್ಲಾ ಏನ ಗೊತ್ತ, ಅಧ್ಯಾತ್ಮ ಹಾಗೂ ಅನುಭಾವ: ಪಡ್ಲಿಂಗ, ಶ್ರೀಶೈಲ ನಿರಂಜನ,ನಾನಾ ಜನ್ಮ ತಿರುಗಿ ಬಂದಿ, ಕಾಮ ಎಂಬ ಸಾಗರದಲ್ಲಿ, ಮಾಡು ಮಗಳ ಹಾದರ, ಚಿದಾನಂದನ ಕಂಡೇನೋ, ನಾ ಮದವೀಯ ಮಾಡಿಕೊಂಡೆ, ತನು ಬಿಡಬ್ಯಾಡ, ಸಂಗತೀಲಿ ಬರುವುದು ಯಾವ ದೀನಸ?, ಬಿಚ್ಚತಾದವ್ವ ನನ್ನ ತಲಿ, ತಮ್ಮ ನೀನೆಂಥ ಗಂಡನು, ಪೂರ್ವದಲ್ಲಿ ಪರವಸ್ತು, ಕುಂಚಿ ಕೊರುವುತಿ, ಜ್ಯಾಡರ ಮುದಿಕಿ, ಎಲ್ಲಿ ಬೀಡಿ ಕಟ್ಟ ನಮ್ಮವ್ವ, ಸವಾಲ್‌: ನೀ ಜ್ಯಾ ಅಂತ ಅಂಜಿಸಬ್ಯಾಡ, ನಡದೈತಿ ಸಭಾ ಒಳೆ ಗರದಿ ಮುಂತಾದ ಗೀಗೀ ಪದಗಳು ಕೃತಿಯಲ್ಲಿ ಸಂಪಾದನೆಗೊಂಡಿವೆ. 

About the Author

ಮ.ಗು. ಬಿರಾದಾರ
(15 March 1933)

ಮೂಲತಃ ವಿಜಯಪುರ ಜಿಲ್ಲೆಯ ಬಬಲಾದ ಗ್ರಾಮದವರಾದ ಮ.ಗು. ಬಿರಾದಾರ (ಎಂ.ಜಿ. ಬಿರಾದಾರ)  15ನೇ ಮಾರ್ಚ್ 1933ರಲ್ಲಿ ಜನಿಸಿದರು. ರತ್ನಾಕರ ವರ್ಣಿ ಹಾಗೂ ಆತನ ಕೃತಿಗಳ ಕುರಿತು ಸಂಶೋಧನಾ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದರು. ಕಾವ್ಯಸಿಂಧೂ -ಕವನ ಸಂಕಲನ, ಸವಕಳಿ-ಕಥಾ ಸಂಕಲನ, ಜೀವಂತ ಗೋರಿಗಳು ಮತ್ತು ಹದ್ದುಗಳು -ನಾಟಕ, ಹರದೇಶಿ-ನಾಗೇಶಿ-ಇವರ ಸಂಪಾದಿತ ಕೃತಿ, ನೂರೆಂಟು ಕಥೆಗಳು: ಕುಂದಣಗಾರರ ಸಾಹಿತ್ಯ, ಮಹಾದೇವಪ್ಪ ರಾಂಪೂರೆ, ಕೆ.ಜಿ. ಕುಂದಣಗಾರ ಅವರ ಜೀವನ ಕೃತಿಗಳು, ಜಾನಪದ ಜೀವಾಳ: ಜಾನಪದ ಸಮಾಲೋಚನೆ-ಇವರ ಕೃತಿಗಳು. ಇವರಿಗೆ ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ...

READ MORE

Related Books