ಜಾನಪದ ವಿದ್ವಾಂಸರಾಗಿದ್ದ ಕೆ ಆರ್ ಕೃಷ್ಣಸ್ವಾಮಿ ಅವರು ಸಂಪಾದಿಸಿ ಪ್ರಕಟಿಸಿದ ಬಹುದೊಡ್ಡ ಜನಪದ ಸಾಹಿತ್ಯ ಸಂಗ್ರಹ ಇದು. ಇಲ್ಲಿ ಸಂಗ್ರಹಿಸಲಾಗಿರುವ ಜನಪದ ಹಾಡುಗಳು ಬಲು ಪರಿಶ್ರಮಪಟ್ಟು ಸಂಪಾದಿಸಿದವುಗಳಾಗಿವೆ. ವಿದ್ವಾಂಸರಾದ ತೀ ನಂ ಶ್ರೀಕಂಠಯ್ಯನವರ ಮುನ್ನುಡಿ ಈ ಕೃತಿಗಿದೆ. ಅಂಬಿಗರ ಗಂಗ ಮತ್ತು ಇತರ ಹಾಡುಗಳು, ಉತ್ತರ ದೇವಿ ಮತ್ತು ಇತರ ಹಾಡುಗಳು, ಪಿರಿಯಾಪಟ್ಟಣದ ಕಾಳಗ ಮತ್ತು ಇತರ ಹಾಡುಗಳು, ಚೆನ್ನಿಗ ಜೋಗಯ್ಯ ಮತ್ತು ಇತರ ಹಾಡುಗಳು ಎಂಬ ನಾಲ್ಕು ವಿಭಾಗಗಳಲ್ಲಿ ಜಾನಪದ ಹಾಡುಗಳ ಸಂಗ್ರಹವಿದೆ ಈ ಕೃತಿಯಲ್ಲಿ.
©2025 Book Brahma Private Limited.