‘ಕತ್ತಾಲ ದಾರಿ ದೂರ’ ಎಂಬುದು ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರು ಅವರ ಕೃತಿ. ಜನಪದದ 11 ಕಥನಗೀತೆಗಳ ಸಂಕಲನವಿದು. ಸತಿ ನೆಪದಲ್ಲಿ ಬೆಂಕಿಗೆ ಬೀಳುವುದು, ಕೆರೆಗೆ ಹಾರದ ನೆಪದಲ್ಲಿ ಬಲಿ ಕೊಡುವುದು ಇಂತಹ ಕಥನಗೀತೆಗಳ ಸಂಗ್ರಹವಿದೆ. ದೇವತೆಗಳ ಹೆಸರಿನಲ್ಲಿ ಹೆಣ್ಣುಮಕ್ಕಳನ್ನೇ ಬಲಿ ತೆಗೆದುಕೊಳ್ಳುವ ಇಂತಹ ಸಂಪ್ರದಾಯಗಳು ಹಾಗೂ ಈ ಸಂಪ್ರದಾಯಗಳಿಗೆ ಅಧೀನಭಾವ ತಳೆಯುವ ಹೆಣ್ಣುಮಕ್ಕಳು, ಬಲಿಗೆ ತಯಾರಾಗುವ ಹೆಣ್ಣಿನ ವರ್ಣನೆಯಿಂದ ಗಮನ ಸೆಳೆಯುವ ಕಥನ ಗೀತೆಗಳು ಹೆಣ್ಣೊಬ್ಬಳ ಮನಸ್ಸಿನೊಳಗೆ ವ್ಯಕ್ತವಾಗುವ ವಿರೋಧವನ್ನೂ ಸೂಕ್ಷ್ಮವಾಗಿ ಹೊರಗೆಡುತ್ತವೆ ಎಂಬುದು ಗಮನಾರ್ಹ. ಪುರುಷ ಪ್ರದಾನ ಸಮಾಜವು ಹೆಣ್ಣುಗಳನ್ನು ತಮ್ಮ ಪ್ರತಿಷ್ಠೆಗಾಗಿ ಹೇಗೆ ಬಳಸಿಕೊಂಡಿತ್ತು ಎಂಬುದರ ವಿವರವಾಗಿಯೂ ಈ ಕಥನಗೀತೆಗಳಿವೆ.
©2024 Book Brahma Private Limited.