ಲೇಖಕ ಡಾ. ಕೆ. ಎಲ್. ಗೋಪಾಲಕೃಷ್ಣಯ್ಯನವರ, ಇತಿಹಾಸಕ್ಕೆ ಸಂಬಂಧಿಸಿದ ಕೃತಿ ʼಇತಿಹಾಸದ ರಾಜಕೀಯʼ. ಹಲವು ಮೂಲಗಳಿಂದ ಹಾಗೂ ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿಷಯಗಳನ್ನು ಲೇಖಕರು ಈ ಕೃತಿಯಲ್ಲಿ ವಿಮರ್ಶಾತ್ಮಕವಾಗಿ ಸಮೀಕ್ಷಿಸಿದ್ದಾರೆ. ಇತಿಹಾಸದ ರಾಜಕೀಯದ ಮೇಲಿನ ಪ್ರಕರಣವನ್ನು ಸೂಕ್ಷ್ಮ ವಿಶ್ಲೇಷಣೆಗೊಳಪಡಿಸಿ ವಸ್ತು ಸ್ಥಿತಿಯನ್ನು ಗ್ರಹಿಸಲು ಇದು ಸಹಾಯಮಾಡುತ್ತದೆ. ಇದರಲ್ಲಿ ಆರ್ಯರು ಭಾರತಕ್ಕೆ ಹೊರಗಿನಿಂದ ವಲಸೆ ಬಂದವರು ಮತ್ತು ಖಗ್ವೇದವು ಆರ್ಯರ ಹಿಂದಿನ ಹಾಗೂ ನಂತರದ ಅನುಭವಗಳನ್ನು ಪ್ರತಿಫಲಿಸುತ್ತದೆ ఎంబ ಅಭಿಪ್ರಾಯಗಳ ಸತ್ಯಾಂಶಗಳ ಬಗ್ಗೆಯೂ ಚರ್ಚಿಸಲಾಗಿದೆ. ಈ ಮಧ್ಯೆ ಇಬ್ಬರು ವಿದ್ವಾಂಸರು ಸಿಂಧೂ ಲಿಪಿಯನ್ನು ನಿರ್ವಚಿಸಿ, ಆರ್ಯರ ವಲಸೆ ಕುರಿತು ಸಮರ್ಥ ಆಧಾರ ಒದಗಿಸಿದ ಕುರಿತಾಗಿಯೂ ಇಲ್ಲಿ ಹೇಳಲಾಗಿದೆ.
©2024 Book Brahma Private Limited.