‘ಹುಡುಕಾಟವನ್ನು ನಿಲ್ಲಿಸದಿರೋಣ’ ಕೃತಿಯು ಜೆ.ಎಸ್. ಸದಾನಂದ ಅವರ ವಸಾಹತುಶಾಹಿ ಕುರಿತ ಸಂಪಾದಿತ ಕನ್ನಡಾನುವಾದ ಕೃತಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ವಸಾಹತುಶಾಹಿ, ವಸಾಹತುಪ್ರಜ್ಞೆ ಮತ್ತು ನಿರ್ವಸಾಹತೀಕರಣ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಆದರೆ, ಈ ಚರ್ಚೆಗಳಲ್ಲಿ ಅಡಗಿರುವಂತಹ ಪ್ರಮುಖ ವಿಚಾರಗಳು ಹಲವೊಮ್ಮೆ ವಸಾಹತೀಕರಣಗೊಂಡ ಚೌಕಟ್ಟುಗಳಿಂದಲೇ ಪ್ರೇರಿತವಾಗಿ, ಅವೇ ಸಿದ್ಧಾಂತಗಳನ್ನಾಧರಿಸಿ ಈ ಚರ್ಚೆಗಳು ನಡೆಯುವಂಥದು. ಅಂಥ ಹಾದಿಯಿಂದ ಹೊರಬಂದು ಬೇರೆಯೇ ದಿಕ್ಕಿನಿಂದ ವಸಾಹತೀಕರಣದ ಪ್ರಕ್ರಿಯೆಯನ್ನು ಶೋಧಿಸುವ ಕೆಲಸವನ್ನೀಗ ಬಾಲಗಂಗಾಧರ ಅವರು ನಡೆಸುತ್ತಿದ್ದಾರೆ. ಅಂಥ ವಿಚಾರಧಾರೆಯನ್ನು ಮಂಡಿಸುವ ಅವರ ದೀರ್ಘಲೇಖನವೊಂದರ ಕನ್ನಡಾನುವಾದ ಇಲ್ಲಿ ಸಂಕಲಿತಗೊಂಡಿದೆ.
©2024 Book Brahma Private Limited.