ಲೇಖಕಿ ಡಾ. ಎಚ್. ಎಸ್, ಅನುಪಮಾ ಅವರ ಕೃತಿ ’ಹೆಣ್ಣು ಸಂಕರ ಕಾಲದ ಆತ್ಮಕತೆ’. ಮಹಿಳಾ ಲೇಖನಗಳನ್ನೊಳಗೊಂಡ ಈ ಕೃತಿಯು ಸ್ತ್ರೀವಾದಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಉಸಿರುಗಟ್ಟಿಸುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಅತ್ಯಾಚಾರವು ಕೇವಲ ಬಲವಂತದ ಲೈಂಗಿಕ ಕ್ರಿಯೆ ಅಲ್ಲ. ಒಬ್ಬ ವ್ಯಕ್ತಿಯಾಗಿ/ಮನುಷ್ಯಳಾಗಿ ಹೆಣ್ಣನ್ನು ನಾಶ ಮಾಡುವ; ಹೆಣ್ಣನ್ನು ನೀನು ಹೆಂಗಸು ಎಂದು ಬೆದರಿಸುವ; ಅಧಿಕಾರವಿರುವ ವರ್ಗ ಅಧಿಕಾರವಿಲ್ಲದ ವರ್ಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ರಾಜಕೀಯ ಸಾಧನವಾಗಿದೆ ಎಂದು ಹೇಳಬಹುದಾದ ಅಂಶವನ್ನು ಬಹು ಚರ್ಚಿತವಾಗಿ ಈ ಕೃತಿ ಅವಲೋಕಿಸುತ್ತದೆ.
ಸಮಾಜ ಮಹಿಳೆಯನ್ನು ಸದಾ ಶರಣಾಗತ ಸ್ಥಿತಿಯಲ್ಲಿಡಲು ಅತ್ಯಾಚಾರ ಎಂಬ ಅಸ್ತ್ರ ಬಳಸಿಕೊಂಡು ಬಂದಿದೆ ಎನ್ನುವ ಹಿನ್ನೆಲೆಯಲ್ಲಿ ಚರ್ಚೆಗೊಳಗಾಗುವ ಅಂಶವನ್ನೂ ಮತ್ತು ಅನಾದಿಯಿಂದಲೂ ಯುದ್ಧವಿರಲಿ, ದಂಗೆಯಿರಲಿ ಅಥವಾ ಕ್ರಾಂತಿಯಿರಲಿ - ಕ್ರೌರ್ಯ, ಉನ್ಮಾದಗಳ ಅಂತಿಮ ಬಾಧಿತಳು ಮಹಿಳೆಯೇ ಆಗಿದ್ದಳು ಎಂಬುದನ್ನೂ, ನಾಗರಿಕ ಸಮಾಜ ಬೇರೆಬೇರೆ ಕಾರಣಗಳಿಗಾಗಿ ರೂಪಿಸಿಕೊಂಡಿರುವ ಸೈನ್ಯ/ಪೊಲೀಸ್ ಮತ್ತಿತರ ರಕ್ಷಣಾ ವ್ಯವಸ್ಥೆಗಳು ಮಹಿಳೆಯರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ ಎಂಬ ವಿರೋಧ ವ್ಯಕ್ತಪಡಿಸುವ ದನಿಯನ್ನೂ, ರಕ್ಷಕ ವ್ಯವಸ್ಥೆಯೇ ಮಹಿಳಾ ವಿರೋಧಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು ನಾಗರಿಕ ಸಮಾಜದ ವಿಪರ್ಯಾಸ ಹೇಗೆ ಆಗಿದೆ ಎಂಬುದನ್ನು ಸೂಕ್ಷ್ಮವಾಗಿ, ಮತ್ತು ಸ್ಥೂಲವಾಗಿ ತೆರೆದಿಡುವ ಕೃತಿ ಇದಾಗಿದೆ.
©2024 Book Brahma Private Limited.