ಟಿ. ಕೇಶವ ಭಟ್ಟ
(02 February 1920 - 20 August 2005)
ಕವಿಯಾಗಿದ್ದ ಟಿ. ಕೇಶವಭಟ್ಟ ಅವರು ಛಂದಸ್ಸು, ವ್ಯಾಕರಣ, ಅಲಂಕಾರ ಸೇರಿದಂತೆ ಕನ್ನಡ ಸಾಹಿತ್ಯದ ಶಾಸ್ತ್ರ ವಿಭಾಗದಲ್ಲಿ ಮಹತ್ವದ ವಿದ್ವಾಂಸರಾಗಿದ್ದರು. ಅವರು ಹುಟ್ಟೂರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ. 1920ರ ಫೆಬ್ರುವರಿ 2 ರಂದು ಜನಿಸಿದರು. ಕೃಷಿಕರಾಗಿದ್ದ ತಂದೆ ಗೋವಿಂದ ಭಟ್ಟರು ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲಿಯೂ ಆಸಕ್ತರಾಗಿದ್ದರು. ಅವರ ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಪೆರೋಡಿಯಲ್ಲಿ ಪಡೆದರು. ಹೈಸ್ಕೂಲು ಸೇರಿ ಎಂಟನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಬೇಕಾಯಿತು. ಕಾಸರಗೋಡು ಬೋರ್ಡ್ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿ ...
READ MORE