ಬಾಯಿಂದ ಬಾಯಿ ಹರಡುತ್ತಲೇ ಜನರ ಮನಸೂರೆಗೊಳಿಸುವ ಜನಪದ ಹಾಡುಗಳ ಬಗ್ಗೆ ಯಾರಿಗೆ ತಿಳಿದಿರುವುದಿಲ್ಲ ಹೇಳಿ?. ಮನೆಯಲ್ಲಿ ಮದುವೆಯಂತಹ ಶುಭ ಸಮಾರಂಭದಿಂದ ಆರಂಭಗೊಂಡು ಸಾವುವರೆಗಿನ ಕುರಿತು ಜಾನಪದ ಹಾಡುಗಳು ನಮ್ಮನ್ನು ಕಾಡದೇ ಬಿಡದು. ಪ್ರಸ್ತುತ ಈ ಕೃತಿಯು ಜಾನಪದ ಗೀತೆಗಳ ಸಂಗ್ರಹ ‘ಹತ್ತು ಮಂದ್ಯಾಗ ಹಾಡ್ಯಾನಾ’. ಈ ಕೃತಿಯಲ್ಲಿ ಒಳಕಲ್ಲಪೂಜೀ ಹಾಡು 1-2, ಬೀಸುಕಲ್ಲ ಪೂಜೀ ಹಾಡು, ಉಯ್ಯಾಲೆ ಹಾಡು, ಇದಿರುಗೊಳ್ಳುವ ಹಾಡು 1-2, ಹಂದರ ಶಾಂಡಿಗಿ ಕಡಿಯುವ ಹಾಡು, ನಯ್ಯಾನ ಏರಿಸುವ ಹಾಡು, ಭುಮದ ಆರತಿ ಹಾಡು, ಹೆಂಡತಿ ಕಾಲು ತೊಳೆಯುವ ಹಾಡು, ತಂಗಿ ಕಾಲು ಹಿಡಿಯುವ ಹಾಡು, ಮಂತರಕ್ಕಿ ಹಾಡು, ನಾಗೋಲಿ ಸಮಯದ ಉಯ್ಯಾಲೆ ಹಾಡು, ಸುರಿಗಿ ಗಟ್ಟಿಸುವ ಹಾಡು, ಹೆಣ್ಣೊಪ್ಪಿಸುವ ಹಾಡು, ಬೀಗರ ಹಾಡು, ಕುಟ್ಟುವ ಹಾಡು, ಕಂಕಣ ಕಟ್ಟುವ ಹಾಡು, ಸುರಗಿ ಕೊಡುವ ಹಾಡು, ಹಾಸಕ್ಕೆ ಹಾಡು, ಬಾಸಿಂಗ ಕಟ್ಟುವ ಹಾಡು, ಬಷ್ಟಗ ಹಾಡು ಹೀಗೆ ಜಾನಪದ ಹಾಡುಗಳನ್ನು ಸಂಗ್ರಹಿಸಿದ ಕೃತಿ.
©2024 Book Brahma Private Limited.