ಹಸ್ತಿನಾವತಿ ಇದು ಭಾರತದ ಕಥೆ ಜೋಗಿ ಅವರ ಕಾದಂಬರಿಯಾಗಿದೆ. ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತು ಮಗನಿಗಾಗಿ ತಪಿಸುತ್ತಾಳೆ, ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ ಮುಗುಳನ್ನು 'ಯೋಗಕ್ಷೇಮಂ ವಹಾಮ್ಯಹಂ ಅನ್ನುತ್ತಾನೆ. ದುಹಾಭಾರತ ಮರುಕಳಿಸುತ್ತದೆ. ಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಾ, ಮತ್ತದೇ ಮಾತುಗಳ ಅನುರಣನ, ಸೂರಿಮೊನೆಯಷ್ಟು ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ. ಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ. ಮನಸು ಧರ್ಮಕ್ಷೇತ್ರ, ಮನಸು ಕುರುಕ್ಷೇತ್ರ! ಮನಸ್ಸೇ ಮಹಾಭಾರತ! ( ಪುಸ್ತಕದ ಬೆನ್ನುಡಿಯಿಂದ)
'ನಮ್ಮನ್ನು ಒಡೆಯೋದಕ್ಕೆ ಹಲವಾರು ಶಕ್ತಿಗಳು ಪ್ರಯತ್ನ ಪಡ್ತಾ ಇರ್ತವೆ. ಆದರೆ ಒಗ್ಗಟ್ಟಾಗಿ ನಿಲ್ಲೋದು ನಮ್ಮ ಕರ್ತವ್ಯ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ, ನಮ್ಮ ದೇಶಕ್ಕಾಗಿ ಏನು ಮಾಡೋದಕ್ಕೆ ಸಾಧ್ಯವೋ ಮಾಡೋಣ. ನಾವು ಬದುಕಿರೋ ತನಕ ಈ ದೇಶದಲ್ಲಿ ಆತ್ಮಗೌರವ ಮತ್ತು ಸಮಾನತೆಯ ಆಶಯಕ್ಕೆ ಭಂಗ ಬರದ ಹಾಗೆ ನೋಡ್ಕೊಳ್ಳೋಣ. ನಮ್ಮೆಲ್ಲರ ತಲೆಯ ಮೇಲೂ ತಿರುಗೋ ಚಕ್ರ ಇದೆ. ಅದನ್ನು ಮತ್ತೊಬ್ಬನ ತಲೆಗೆ ವರ್ಗಾಯಿಸದೇ ನಾವು ನಿವೃತ್ತರಾಗೋದಕ್ಕೆ ಆಗೋದಿಲ್ಲ. ಅರ್ಹನಾದ ಮತ್ತೊಬ್ಬ ಬರೋ ತನಕ ಈ ಬವಣೆ ತಪ್ಪಿದ್ದಲ್ಲ. ದಿಸ್ ಈಸ್ ಯುವ ಫೇಟ್, ಮೈ ಮ್ಯಾನ್' ಅಂತ ಸಹದೇವನ ಭುಜ ತಟ್ಟಿದರು.
©2024 Book Brahma Private Limited.