ಹನ್ನೆರಡನೆಯ ರಾತ್ರಿ

Author : ಜಿ.ಎಂ. ಕೃಷ್ಣಮೂರ್ತಿ

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560001
Phone: 080 4011 4455

Synopsys

ಶೆಕ್ಸ್ ಪಿಯರ್ ಅವರ ಪ್ರಸಿದ್ಧ ನಾಟಕಗಳ ಪೈಕಿ ಟ್ವೆಲ್ತ್ ನೈಟ್ ಸಹ ಒಂದು. ಈ ನಾಟಕದ ಸಾರ ಸಂಗ್ರಹವನ್ನು ಮಕ್ಕಳಿಗೆ ತಿಳಿ ಹೇಳುವಂತೆ ಸರಳ ಭಾಷೆಯಲ್ಲಿ `ಹನ್ನೆರಡನೆಯ ರಾತ್ರಿ’  ಶೀರ್ಷಿಕೆಯಡಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ರಚಿಸಿದ್ದಾರೆ.ಇದೊಂದು ವೈನೋದಿಕ ಪ್ರೇಮ ಕಥೆ. ನೌಕಾಘಾತದಿಂದ ಆರಂಭವಾಗುವ ಈ ನಾಟಕವು, ಈ ಅಪಘಾತದಲ್ಲಿ ಶ್ರೀಮಂತ ಮಹಿಳೆಯೊಬ್ಬಳು ತನ್ನ ಅವಳಿ ಸಹೋದರನಿಂದ ಬೇರೆಯಾಗುತ್ತಾಳೆ. ಇಲಿಯಾ ಎಂಬ ರಾಜ್ಯದ ತೀರಪ್ರದೇಶಕ್ಕೆ ತೇಲಿಕೊಂಡು ಹೋಗುತ್ತಾಳೆ. ಈ ಮಧ್ಯೆ, ತಪ್ಪು ಗ್ರಹಿಕೆಯಿಂದ ಉಂಟಾಗುವ ಭಾವನೆಗಳು, ಭಂಗ ತರುವ ಘಟನೆಗಳು ಹಾಗೂ ಮನರಂಜಿಸುವ ಸನ್ನಿವೇಶಗಳ ಒಟ್ಟು ಮೊತ್ತವಾಗಿ ಈ ನಾಟಕ ಮನಸೆಳೆಯುತ್ತದೆ. ಕಥೆಯ ನಿರೂಪಣೆಯು ತೀರಾ ಸರಳವಾಗಿದ್ದು, ಪಾಲಕರೂ ಸಹ ಓದಿ ಮಕ್ಕಳಿಗೆ ತಿಳಿಸಬಹುದು. ಅಷ್ಟೊಂದು ಆಸಕ್ತಿಯ ನಿರೂಪಣಾ ಶೈಲಿ ಇಲ್ಲಿದೆ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books