ಗೋಪಾಲಕೃಷ್ಣ ಪೈ

Author : ಗೀತಾ ಶೆಣೈ

Pages 120

₹ 80.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಅಂಚೆಪಟ್ಟಿಗೆ ಸಂಖ್ಯೆ:5159 ಬೆಂಗಳೂರು-560 001
Phone: 080-22203580

Synopsys

’ಸ್ವಪ್ನ ಸಾರಸ್ವತ’ ಎಂಬ ಅನನ್ಯ ಕೃತಿಯೊಂದನ್ನು ಕನ್ನಡಕ್ಕೆ ನೀಡುವ ಮೂಲಕ ಮನೆಮಾತಾದವರು ಗೋಪಾಲಕೃಷ್ಣ ಪೈ. ಸಮುದಾಯವೊಂದು ಬಲವಂತವಾಗಿ ಊರು ತೊರೆದ ಕತೆಯನ್ನು ತಮ್ಮ ಅದ್ಭುತ ಪ್ರತಿಭೆ ಎರಕ ಹೊಯ್ದು ಪೈ ಕಟ್ಟಿಕೊಟ್ಟಿದ್ದಾರೆ. ಬ್ಯಾಂಕ್ ಉದ್ಯೊಗಿಯಾಗಿದ್ದ ಅವರು ಅಲ್ಲಿ ಕೇಳಿದ ಗೌಡ ಸಾರಸ್ವತ ಬ್ರಾಹ್ಮಣರ ತಲೆಮಾರುಗಳ ಹಿಂದಿನ ಬದುಕನ್ನು ಚಿತ್ರಿಸಿದ್ದಾರೆ. ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. 

’ತಿರುವು’, ’ಈ ಬೆರಳ ಗುರುತು’, ’ಹಾರುವ ಹಕ್ಕಿಯ ಗೂಡಿನ ದಾರಿ’,’ಆಧುನಿಕ ಚೀನೀ ಸಣ್ಣಕತೆಗಳು’ ಅವರ ಇತರ ಮುಖ್ಯ ಕೃತಿಗಳು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಇರುವ ಪೆರ್ಲ, ಪೈ ಅವರ ಹುಟ್ಟೂರು. ನವ ಕರ್ನಾಟಕ ಪ್ರಕಾಶನಕ್ಕಾಗಿ ಪೈ ಜೀವನವನ್ನು ರಚಿಸಿಕೊಟ್ಟಿದ್ದಾರೆ ಡಾ. ಗೀತಾ ಶೆಣೈ. 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books