`The taming of the shrew' ಶೇಕ್ಸ್ ಪಿಯರ್ ನ ಈ ನಾಟಕವನ್ನು ಮಕ್ಕಳಿಗೆ ತಿಳಿಯುವ ಹಾಗೆ ಸಣ್ಣ ವೃತ್ತಾಂತ ರೂಪದಲ್ಲಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ರಚಿಸಿದ ನಾಟಕವಿದು. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ಶೆಕ್ಸ್ ಪಿಯರ್ ನ ಅತ್ಯಂತ ಪ್ರಸಿದ್ಧಿಯ ವೈನೋದಿಕ ನಾಟಕವಿದು. ಶ್ರೀಮಂತನ ಮಗಳು ಅತ್ಯಂತ ಸಿಡುಕಿನ ಸ್ವಭಾವದವಳು. ಆಕೆಯೇ ನಾಟಕದ ಕೇಂದ್ರ. ಈಕೆಯ ಸಿಡಿಮಿಡಿಯ ಸ್ವಭಾವದಿಂದ ಯಾರೂ ಮದುವೆಯಾಗುವುದಿಲ್ಲ ಎಂದು ಸ್ವತಃ ತಂದೆಯೇ ತಿಳಿದುಕೊಂಡಿರುತ್ತಾನೆ. ಆದರೆ, ಮತ್ತೊಬ್ಬ ಶ್ರೀಮಂತ ಈಕೆಯನ್ನು ಮದುವೆಯಾಗುತ್ತಾನೆ. ಅಲ್ಲದೇ, ಆಕೆಯ ವರ್ತನೆಗಳಲ್ಲೂ ಬದಲಾವಣೆ ತರುತ್ತಾನೆ ಎಂಬುದು ಈ ನಾಟಕದ ವಸ್ತು. ಮಕ್ಕಳು ತಾವೇ ಓದಿಕೊಳ್ಳಬಹುದಾದಷ್ಟು ಸರಳ ಭಾಷೆಯ ಈ ನಾಟಕವನ್ನು ಪಾಲಕರೂ-ಶಿಕ್ಷಕರೂ ಓದಿ, ಮಕ್ಕಳಿಗೆ ಒಟ್ಟು ನಾಟಕದ ಸಾರವನ್ನು ಮನದಟ್ಟಾಗುವಂತೆ ಮಾಡಬಹುದು.
©2024 Book Brahma Private Limited.