ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಚೀನಾದೊಂದಿಗಿನ ಗಡಿ ಸಮಸ್ಯೆಗಳು ಇಲ್ಲವಾಗುತ್ತವೆ ಎಂಬ ಭಾವನೆ ಇತ್ತು. ಆದರೆ ಆ ಭಾವನೆ ಹುಸಿಯಾಯಿತು. ದೋಕ್ಲಾಂ ಬಿಕ್ಕಟ್ಟು ಭುಗಿಲೆದ್ದಿತು. ಯಾರೇ ಅಧಿಕಾರಕ್ಕೆ ಬಂದರೂ ಪರಿಸ್ಥಿತಿ ಸುಧಾರಿಸದು ಎಂಬ ಸಂದೇಶ ಹೊರಟಿತು. ಈ ಗಡಿ ತಂಟೆಯ ಪೂರ್ವಾಪರವನ್ನು ವಿವರಿಸಿದ್ದಾರೆ ಲೇಖಕ ಯಡೂರ ಮಹಾಬಲ. ದೋಕ್ಲಾಂ ವಿವಾದ ಇಂದಿನ ಸಮಸ್ಯೆಯಲ್ಲ ಅದಕ್ಕೆ ಒಂದು ಶತಮಾನದಷ್ಟು ಇತಿಹಾಸವಿದೆ ಎನ್ನುವ ಗಮನಾರ್ಹ ಅಂಶವನ್ನು ಲೇಖಕರು ಉಲ್ಲೇಖಿಸುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ಹಲವು ಮಾರ್ಗಗಳಿದ್ದರೂ ಇತಿಹಾಸದುದ್ದಕ್ಕೂ ಅದನ್ನು ಹೇಗೆ ನಿರ್ಲಕ್ಷಿಸುತ್ತ ಬರಲಾಯಿತು ಎಂಬುದನ್ನು ಹಾಗೂ ಇದು ಭಾರತಕ್ಕೆ ತಂದೊಡ್ಡಿದ ಸಮಸ್ಯೆಗಳನ್ನು ಚರ್ಚಿಸುತ್ತಾರೆ.
ಒಟ್ಟು 7 ಅಧ್ಯಾಯಗಳನ್ನು ಹೊಂದಿರುವ ಕೃತಿ ಗಡಿ ತಂಟೆಗೂ ಭೂತಾನ್ ದೇಶಕ್ಕೂ ಇರುವ ಸಂಬಂಧವನ್ನು ವಿಶ್ಲೇಷಿಸುತ್ತದೆ. ಅಲ್ಲದೆ ದೋಕ್ಲಾಂ ಬಳಿ ರಸ್ತೆ ನಿರ್ಮಿಸಲು ಚೀನಾ ಮುಂದಾದಾಗ ಭಾರತ ಎದುರಿಸಿದ ಮುಖಭಂಗವನ್ನು ಕೂಡ ಪ್ರಸ್ತಾಪಿಸಲಾಗಿದೆ. ಒಂದು ಘಟನೆಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವುದಕ್ಕಿಂತಲೂ ಅದರ ಆಳ ಅಗಲ ಅರಿತು ಉತ್ತರಿಸಬೇಕು ಎನ್ನುವ ಕಾರಣಕ್ಕೆ ಕೃತಿಯನ್ನು ಓದಬಹುದು. ಪತ್ರಕರ್ತರು, ಸಮಾಜವಿಜ್ಞಾನಿಗಳು, ರಾಜಕಾರಣಿಗಳು, ಚಿಂತಕರು ಓದಲೇಬೇಕಾದ ಕೃತಿ ಇದು.
©2024 Book Brahma Private Limited.