ಚಿದಾನಂದ ಮೂರ್ತಿ

Author : ಸಂಗಮೇಶ ಸವದತ್ತಿಮಠ

Pages 112

₹ 60.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಡಾ. ಎಂ. ಚಿದಾನಂದ ಮೂರ್ತಿ ಅವರು ಮೂಲತಃ ಕನ್ನಡ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ತಮ್ಮನ್ನು ಮೀಸಲಾಗಿರಿಸಿಕೊಂಡಿರುವಂಥವರು. ತಮ್ಮ ಕನ್ನಡ ಪರ ಕಾಳಜಿಗಳಿಂದಾಗಿ ಕನ್ನಡ ಪ್ರಾಧ್ಯಾಪಕರಲ್ಲಿಯೇ ವಿರಳರೂ, ವಿಶಿಷ್ಟರೂ ಆದವರು. ಛಂದಸ್ಸು, ಗ್ರಂಥ ಸಂಪಾದನೆ, ಶಾಸನ, ಸಂಸ್ಕೃತಿ, ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಜಾನಪದ - ಇಂಥ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡಿದ ಪ್ರಮುಖ ವಿದ್ವಾಂಸರು. ತಮ್ಮ "ಹೊಸತು ಹೊಸತು" ಕೃತಿಗೆ 1997ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸಂದಿದೆ.

ಕೃತಿಯು ಡಾ. ಎಂ. ಚಿದಾನಂದ ಮೂರ್ತಿಯವರನ್ನು ಪರಿಚಯಾತ್ಮಕವಾಗಿ ವಿವರಿಸುತ್ತದೆ. ಗುಲಬರ್ಗಾ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಸಂಗಮೇಶ ಸವದತ್ತಿಮಠ ಈ ಪುಸ್ತಕದ ಲೇಖಕರು.

About the Author

ಸಂಗಮೇಶ ಸವದತ್ತಿಮಠ
(01 April 1943)

ಡಾ. ಸಂಗಮೇಶ ಸವದತ್ತಿಮಠ ಅವರು  ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು. ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ...

READ MORE

Related Books