`ದಿ ಟೆಂಪೆಸ್ಟ್’ ಹೆಸರಿನ ಶೆಕ್ಸ್ ಪಿಯರ್ ಈ ನಾಟಕದ ಸಣ್ಣ ವೃತ್ತಾಂತವಾಗಿ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಮಕ್ಕಳ ನಾಟಕವಾಗಿ ಪರಿವರ್ತಿಸಿದ್ದಾರೆ. ಶೆಕ್ಸ್ ಪಿಯರ್ ನ ಮಾಂತ್ರಿಕ ನಾಟಕಗಳ ಪೈಕಿ ಈ ನಾಟಕವೂ ಒಂದು. ಇಲ್ಲಿಯ ಭಾಷೆಯೂ, ಕ್ರಿಯೆಯೂ, ಪಾತ್ರಗಳೂ ಮಾಂತ್ರಿಕವಾಗಿವೆ. ದತ್ತ ಅಧಿಕಾರವು ಅಧಿಕಾರಿ ಹಾಗೂ ಸೇವಕ ಮಧ್ಯೆ ಹೇಗೆ ಕೆಲಸ ಮಾಡುತ್ತದೆ. ಅದರ ಸ್ವರೂಪ ಹೇಗಿರುತ್ತದೆ ಎಂಬುದರ ಚಿತ್ರಣ ನೀಡುವುದು ಈ ನಾಟಕದ ಉದ್ದೇಶ. ಏಕೆಂದರೆ, ಅಧಿಕಾರದ ನಿಯಂತ್ರಣ ಹೇಳಿದಷ್ಟು ಸುಲಭವಲ್ಲ. ನ್ಯಾಯ ಹಾಗೂ ನೈತಿಕತೆಯು ನಾಟಕದ ಪ್ರಧಾನ ಬಿಂದುಗಳು. ಇವುಗಳ ಅಗತ್ಯವನ್ನು ತಿಳಿಸುವುದು ಸಹ ನಾಟಕದ ವೈಶಿಷ್ಟ್ಯ.
©2024 Book Brahma Private Limited.