ಕನ್ನಡ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡು ಒಂದಿಷ್ಟು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಅನುಭವಿ, ಉತ್ತಮ ಅಧ್ಯಾಪಕಿಯಾಗಿ ಮಕ್ಕಳ ಮನಸ್ಸು ಗೆದ್ದಿರುವ, ಶಕುಂತಲಾ ಪಿ ಹಿರೇಮಠ ಇವರು ಈಗ ಮಕ್ಕಳ ನಾಟಕಗಳ ಮೂಲಕ ಮಕ್ಕಳ ರಂಗಭೂಮಿ ವಲಯಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಶ್ಲಾಘನೀಯ. ಮಕ್ಕಳ ಸಾಹಿತ್ಯ ವಲಯಕ್ಕೆ ಶಿಕ್ಷಕರ ಕೊಡುಗೆ ಅಪಾರವಾದದ್ದು. ಅಧ್ಯಾಪಕಿ ಶಕುಂತಲಾ ಪಿ ಹಿರೇಮಠ ಅವರ "ನಿಯತ್ತಿನ ಹುಡುಗಿ", ಭೀಮಜ್ಜನಭೂತ, ದೆವ್ವ ಓಡಿಹೋಯಿತು, ನಾಟಕಗಳು ಮಕ್ಕಳ ಅರಿವು, ಕುತೂಹಲ ಹೆಚ್ಚಿಸುವ ಕಥಾಹಂದರವನ್ನು ಹೊಂದಿವೆ. ರಂಗ ಆಸಕ್ತರಿಂದ ಈ ನಾಟಕಗಳು ಪ್ರಯೋಗಗೊಂಡು ಮಕ್ಕಳ ಮನಮುಟ್ಟುವಲ್ಲಿ ಯಶಸ್ವಿಯಾಗಬಲ್ಲ ರಂಗಪಠ್ಯ ಹೊಂದಿವೆ. ಕನ್ನಡ ಸಾಹಿತ್ಯ ಪೋಷಕರು ಪ್ರೋತ್ಸಾಹಿಸಿದರೆ ಇವರಿಂದ ಇನ್ನಷ್ಟು ಮಕ್ಕಳ ಸಾಹಿತ್ಯ ಕೃಷಿ ನಿರೀಕ್ಷಿಸಬಹುದು. ಅವರಿಂದ ಮತ್ತಷ್ಟು ಉತ್ತಮ ಕೃತಿಗಳನ್ನು ನಿರೀಕ್ಷಿಸುತ್ತಾ ಶುಭಹಾರೈಸಿ ಅಭಿನಂದಿಸುವೆ ಎಂದು ಬೆನ್ನುಡಿಯಲ್ಲಿ ರವಿರಾಜ್ ಸಾಗರ್ ತಿಳಿಸಿದ್ದಾರೆ.
©2024 Book Brahma Private Limited.