ಭಾರತೀಯ ಮಹಿಳಾ ಚಳವಳಿಗೆ ಸ್ಫೂರ್ತಿ ಒದಗಿಸಿದ ಅಂತರರಾಷ್ಟ್ರೀಯ ಆಂದೋಲನಗಳನ್ನು ಪರಿಚಯಿಸುವ ಕೃತಿ ಇದು. ಕನಕ್ ಮುಖರ್ಜಿ ಇದರ ಮೂಲ ಬರಹಗಾರರಾಗಿದ್ದು ’ರಾಹು’ ಅವರು ಕನ್ನಡೀಕರಿಸಿದ್ದಾರೆ. ಎಂಗೆಲ್ಸ್, ಆಗಸ್ಟ್ ಬೆಜೆಲ್, ಕ್ಲಾರಾ ಝಟ್ ಕಿನ್, ಲಾರಾ ಲಫರ್ ಹಾಗೂ ರೋಜಾ ಲಕ್ಸೆಂಬರ್ಗ್ ಅವರು ಅಂತರರಾಷ್ಟ್ರೀಯ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿದುದನ್ನು ಕೃತಿ ದಾಖಲಿಸುತ್ತದೆ.
ಅಲ್ಲದೆ ಕಾರ್ಮಿಕ ವರ್ಗ ಹುಟ್ಟುಹಾಕಿದ ಅಂತರರಾಷ್ಟ್ರೀಯ ಮಹಿಳಾ ವಿಮೋಚನೆಯ ಆಂದೋಲನ, ಸಮಾಜವಾದಿ ಸೈದ್ದಾಂತಿಕ ದೃಷ್ಟಿಕೋನದ ಮಾರ್ಗದರ್ಶನದಲ್ಲಿ ನಡೆದ ಮಹಿಳಾ ಆಂದೋಲನ, ಯುರೋಪ್ ಮತ್ತು ಅಮೆರಿಕಾದ ಜನಪ್ರಿಯ ಉದಾರವಾದಿ ಚಳುವಳಿಗಳು ಭಾರತೀಯ ಸ್ತ್ರೀಪರ ಹೋರಾಟಗಳಿಗೆ ಸ್ಫೂರ್ತಿಯಾಗಿರುವುದನ್ನು ವಿವರಿಸಲಾಗಿದೆ.
©2024 Book Brahma Private Limited.