ಒಬ್ಬ ಹೋರಾಟಗಾರನನ್ನು ಆತ್ಯಂತಿಕವಾಗಿ ವಿರೋಧಿಸುವುದು ಸಾಧ್ಯವಾಗದೇ ಹೋದರೆ ಆತನಿಗೆ ತಮ್ಮ ಸಿದ್ಧಾಂತಗಳ ಬಣ್ಣ ಬಳಿದುಬಿಡುವುದು ಒಂದು ಬಗೆಯ ರಾಜಕಾರಣ. ಹಾಗೆ ಮಾಡುವುದರಿಂದ ಬಗೆ ಬಗೆಯ ಲಾಭವಿದೆ. ಮೊದಲನೆಯದು ಇತಿಹಾಸವನ್ನು ತಿರುಚಿ ತನಗೆ ಬೇಕಾದಂತೆ ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಎರಡನೆಯದು ಆ ನಾಯಕನಿಗಿಂತಲೂ ತಮ್ಮ ಸಿದ್ಧಾಂತ ದೊಡ್ಡದು ಎಂಬುದನ್ನು ಬಿಂಬಿಸಿದಂತಾಗುತ್ತದೆ. ಮೂರನೆಯದು ಹೊಸತಲೆಮಾರನ್ನು ತಮಗೆ ಬೇಕಾದಂತೆ ಅಣಿಗೊಳಿಸಿಕೊಳ್ಳಲು ಸಹಾಯಕವಾಗುತ್ತದೆ. ನಾ ದಿವಾಕರ ಅನುವಾದಿಸಿರುವ ವಿವಿಧ ಲೇಖನಗಳ ಸಂಕಲನ ’ಭಗತ್ ಸಿಂಗ್-ವೀರ ಸಾವರ್ಕರ್’ ಈ ಅಂಶಗಳನ್ನು ಪ್ರಶ್ನಿಸುತ್ತದೆ.
ಕಾಲ ಸರಿದಂತೆ ಮಸುಕಾಗುವ ಇಬ್ಬರು ಚಾರಿತ್ರಿಕ ವ್ಯಕ್ತಿಗಳ ನಡುವಿನ ವ್ಯತ್ಯಾಸವನ್ನು ಅನುವಾದಕರು ತೆರೆದಿಟ್ಟಿದ್ದಾರೆ. ಯಾರು ಪಲಾಯನವಾದಿಯಾಗಿದ್ದರು; ಯಾರು ನಿಜವಾಗಿಯೂ ದೇಶಭಕ್ತರಾಗಿದ್ದರು. ನಂತರದ ದಿನಗಳಲ್ಲಿ ಅವರಿಬ್ಬರನ್ನೂ ಹೇಗೆ ಬಿಂಬಿಸಲಾಯಿತು ಎಂಬುದನ್ನು ಕೃತಿ ವಿವರಿಸುತ್ತದೆ.
©2024 Book Brahma Private Limited.