ಆರ್.ಕೆ. ಶಾನಭೋಗ ಅವರು ಮಕ್ಕಳಿಗಾಗಿ ಬರೆದ ನಾಟಕ-ಅಪೂರ್ವ. ಮಕ್ಕಳ ಸಾಹಿತ್ಯ ರೂಪುಗೊಳ್ಳುತ್ತಿದೆ ಎಂದರೂ ಕಡಿಮೆ. ಅದರಲ್ಲೂ ಮಕ್ಕಳ ನಾಟಕಗಳು ಕಡಿಮೆ. ತೀರಾ ಸರಳ ಸಂಭಾಷಣೆಗಳು, ಸನ್ನಿವೇಶಗಳ ಜೋಡಣೆ, ಮನರಂಜನೆ ಜೊತೆಗೆ ಬೋಧನೆಯೂ ಇರುವುದು ಮಕ್ಕಳ ನಾಟಕದ ಪ್ರಮುಖ ಲಕ್ಷಣ. ಈ ಎಲ್ಲ ನಿಟ್ಟಿನಿಂದ ಎಚ್ಚರವಹಿಸಿ ಲೇKಕ ಆರ್.ಕೆ. ಶಾನಭೋಗ ಅವರು ರಚಿಸಿದ ಕೃತಿ.
ಬಡ ಹುಡುಗಿ ಅಪೂರ್ವ. ಅವಳ ಕರವಸ್ತ್ರ ಗಾಳಿಗೆ ಹಾರಿ ಗಿಡದ ಪೊಟರೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಗಿಡ ಹತ್ತಿ ನೋಡಿದರೆ ಏನಾಶ್ಚರ್ಯ? ಈ ಪೊಟರೆಯೊಳಗೆ ಏನಿತ್ತು? ಅದು ಅದ್ಭುತ ಲೋಕ. ಇದರ ಸುತ್ತ ನಾಟಕದ ಕಥಾ ವಸ್ತು ಸುತ್ತುತ್ತದೆ. ಮಕ್ಕ:ಳಿಗಾಗಿ ಬರೆದ ರಮ್ಯ ನಾಟಕ. ನಿಸರ್ಗದ ವೈಚಿತ್ಯ್ರಗಳ ಬಗ್ಗೆ ಈ ನಾಟಕ ಉತ್ತಮ ಸಂದೇಶ ನೀಡುತ್ತದೆ.
©2024 Book Brahma Private Limited.