ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರು ಬರೆದ (ಅಂಚೆ ಮನೆ) ಕೃತಿಯನ್ನಾಧರಿಸಿ ನಾಟಕಕಾರ ಕೆ.ವಿ.ಸುಬ್ಬಣ್ಣ ಬರೆದ ಮಕ್ಕಳ ನಾಟಕ-ಅಂಚೆ ಮನೆ. ಆದರೆ, ಮೂಲ ಕೃತಿಯ ಅನುವಾದವಲ್ಲ; ಆ ಕೃತಿಯನ್ನು ಆಧರಿಸಿ ಮಾಡಿಕೊಂಡಿರುವ ಪ್ರಯೋಗ ಪಾಠ. ತೀರಾ ಸಾಂಕೇತಿಕವಾದ ಪ್ರಯೋಗಗಳನ್ನು ಬಿಟ್ಟು ಸಡಿಲಗೊಳಿಸಿದ್ದು, ಮನೋರಂಜಕವಾಗಿ ಮಾಡಲಾಗಿದೆ ಎಂದು ಲೇಖಕರು ಹೇಳಿದ್ದಾರೆ. ಈ ನಾಟಕವು ಮೊದಲ ಬಾರಿಗೆ ಹೆಗ್ಗೋಡಿನ ನಿನಾಸಂನ ಶಿವರಾಮ ಕಾರಂತ ರಂಗಮಂದಿರದಲ್ಲಿ (26-11-1972) ಕೆ.ವಿ.ಸುಬ್ಬಣ್ಣ ಅವರ ನಿರ್ದೇಶನದಲ್ಲಿ ಪ್ರಯೋಗಿಸಲಾಯಿತು.
©2024 Book Brahma Private Limited.