ಅಕ್ಬರ್ ಚಕ್ರವರ್ತಿಯ ಚರಿತ್ರೆಯ ಕೃತಿಯನ್ನು ರಾ.ಹ. ದೇಶಪಾಂಡೆ ಅವರು ಬರೆದಿದ್ದು ಇದೀಗ 3ನೇ ಆವೃತ್ತಿ ಪ್ರಕಟವಾಗಿದೆ. ಈ ಮೊದಲು 1818ರಲ್ಲಿ ದ್ವಿತೀಯ ಮುದ್ರಣ ಕಂಡಿತ್ತು. ಮೊಗಲ್ ಸಾಮ್ರಾಜ್ಯದ ಪ್ರಸಿದ್ಧ ದೊರೆ ಎಂದೇ ಖ್ಯಾತಿಯ ಅಕ್ಬರ್ ಚಕ್ರವರ್ತಿಯ ಪೂರ್ವಜರು, ಅಕ್ಬರನ ಬಾಲ್ಯ ಹಾಗೂ ಬೈರಾಮಖಾನನ ರಾಜ್ಯಾಡಳಿತವೂ, ಅಕ್ಬರನೂ ರಜಪೂತರೂ, ಅಕ್ಬರನ ಧರ್ಮ (ಮತ) ವಿಚಾರಗಳು ಹೀಗೆ ಒಟ್ಟು 8 ಅಧ್ಯಾಯಗಳ ಮೂಲಕ ಅಕ್ಬರನ ಇಡೀ ರಾಜ್ಯಾಡಳಿತದ ಕ್ರಮವನ್ನು ಹಾಗೂ ವ್ಯಕ್ತಿಯಾಗಿ ಆತನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.
©2024 Book Brahma Private Limited.