About the Author

ಕವಯತ್ರಿ ಜಯಲಕ್ಷ್ಮೀ ಸೀತಾಪುರ ಅವರು 1952 ಸೆಪ್ಟಂಬರ್ 23 ರಂದು ಜನಿಸಿದರು. ’ನೋ’ (ವಿಮರ್ಶೆ), ’ಐದು ಜಾನಪದ ಪ್ರಬಂಧಗಳು’, ಭಜನೆ ಹಾಡುಗಳು (ಜಾನಪದ), ’ಕುಸ್ತಿ ಕಲೆ’ (ವಯಸ್ಕರ ಶಿಕ್ಷಣ), ಒಗಟನ್ನು ಬಿಡಿಸಿ, ತಬ್ಬಿಬ್ಬು, ಬೆರಗು ಬೆಳಗು (ನಾಟಕ), ನಮ್ಮ ಸುತ್ತಿನ ಕಥನ ಗೀತೆಗಳು, ಎದೆಕದವ ತಟ್ಟಲೆ (ಕಾವ್ಯ), ಜನಪದ ಸಾಹಿತ್ಯದಲ್ಲಿ ಹಾಸ್ಯ, ಹಕ್ಕಿ ಹಾಲ್ಯಾವೆ ಗಿಡದಾಗೆ, ಜಾನಪದ ಹಬ್ಬ, ಲಾವಣಿ ತರಂಗ, ದಿಟ್ಟ ಸಾಧಕ (ಜೀವನ ಚರಿತ್ರೆ), ಜನಪದ ಒಕ್ಕಲು, ಒಗಟುಗಳು, ಶೋಧ, ಕನ್ನಡ ಜಾನಪದ, ಕನ್ನಡ ಸಮಗ್ರ ಗಾದೆಗಳು ಸಂ. 3 ಮತ್ತು 4, ಕನ್ನಡದಲ್ಲಿ ಐತಿಹಾಸಿಕ ಜನಪದ ಲಾವಣಿಗಳು’ ಅವರ ಕೃತಿಗಳು. ಅವರ ಸಾಹಿತ್ಯ ಸೇವೆಗೆ ಮುದ್ದು ಮಾದಪ್ಪ ಪ್ರಥಮ ಸಾಲಿನ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ದಿ. ಹಲಗೇಗೌಡ ಸ್ಮಾರಕ ಪ್ರಶಸ್ತಿಗಳು ಲಭಿಸಿವೆ. 

ಜಯಲಕ್ಷ್ಮೀ ಸೀತಾಪುರ

(23 Sep 1952)