ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಸುಶೀಲ ನೆಲ್ಲಿಸರ ಅವರು ಸಾಹಿತ್ಯಾಸಕ್ತರು ಕೂಡ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ನೆಲ್ಲಿಸರದವರು. ಮದುವೆ ಮನೆಗಳಲ್ಲಿ ನಡೆಸುವ ಶಾಸ್ತ್ರ ಸಂಪ್ರದಾಯಗಳ ನಡುವೆ ಪದ ಹಾಡುವುದು ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿದೆ. ನೆಲ್ಲಿಸರ ಅವರು ಈ ಕುರಿತು ದಕ್ಷಿಣ ಕರ್ನಾಟಕದ ಮದುವೆ ಹಾಡುಗಳು ಎಂಬ ಕೃತಿಯನ್ನು ರಚಿಸಿದ್ದಾರೆ.