ಮಿಲನಿಯಮ್ ಸರಣಿ ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಮೊದಲ ಪುಸ್ತಕ ’ಹುಡುಕಾಟ’. ಲ್ಯಾಟಿನ್ ಅಮೆರಿಕದ ಪ್ರಾಚೀನತೆ ಮತ್ತು ಭೌಗೋಳಿಕ ವೈವಿಧ್ಯವನ್ನು ಪರಿಚಯಿಸುವ ಪುಸ್ತಕ, ಅಲ್ಲಿರುವ ಪ್ರಪಂಚದಲ್ಲೇ ಅತಿ ಎತ್ತರದ ಏಂಜಲ್ ಫಾಲ್ಸ್ 'ಟೆಪೂ' ಶಿಖರಗಳು, ಪಿರಮಿಡ್ಡುಗಳು, ಗುಹಾನಗರಗಳು ಮತ್ತು ದೈತ್ಯ ಪ್ರತಿಮೆಗಳನ್ನು ಕುರಿತ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ. ಒಂದು ಕಾಲಕ್ಕೆ ಆಂಡಿಸ್ ಪರ್ವತಗಳ ಸಾಲಿನಲ್ಲಿದ್ದ ಮಾಯಾ ಮತ್ತು ಇಂಕಾ ನಾಗರಿಕತೆಗಳು ಹಾಗೂ ಪ್ರಾಬ್ಲೊ ನೆರೂಡ ತನ್ನ ಕಾವ್ಯದಲ್ಲಿ ಹೇಳುವ ಮಚುಪಿಚು ಶಿಖರಗಳ ಪುರಾತನ ಸಂಸ್ಕೃತಿಗಳನ್ನು ಪರಿಚಯಿಸಲಾಗಿದೆ. ಸ್ಪೇನಿನ ಆಕ್ರಮಣದಿಂದ ಲ್ಯಾಟಿನ್ ಅಮೆರಿಕದ ಪ್ರಾಚೀನ ನಾಗರಿಕತೆಗಳು ಹೇಗೆ ಬೆಳಕಿಗೆ ಬಂದವೆನ್ನುವುದನ್ನು ಹೇಳುತ್ತದೆ. ಹಾಗೆಯೇ ಲ್ಯಾಟಿನ್ ಅಮೆರಿಕ ಸ್ಪೇನಿನ ವಸಾಹತುವಾಗಿ ಮಾರ್ಪಟ್ಟ ದುರಂತ ಕತೆ ಹೇಳುತ್ತದೆ.
©2025 Book Brahma Private Limited.