ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಸಾಹಿತಿ-ಲೇಖಕ ಮಾತ್ರ ಅಲ್ಲ. ಅವರೊಬ್ಬ ಅತ್ಯುತ್ತಮ ಛಾಯಾಗ್ರಾಹಕ ಕೂಡ. ಅವರು ತಾವು ಕ್ಲಿಕ್ಕಿಸಿದ ಚಿತ್ರಗಳನ್ನು ಒಳಗೊಂಡ ಚಿತ್ರಲೇಖನಗಳನ್ನು ಹಲವು ಪತ್ರಿಕೆ-ವಿಶೇಷಾಂಕಗಳಲ್ಲಿ ಪ್ರಕಟಿಸಿದ್ದರು. ಅವುಗಳನ್ನು ಸೇರಿಸಿ ’ಮಾಯೆಯ ಮುಖಗಳು (2010) ಪ್ರಕಟಿಸಲಾಗಿದೆ. ಇದೊಂದು ದೃಶ್ಯ ಕಾವ್ಯ. ಇದು ಪರಿಸರದ ದಿನನಿತ್ಯದ ಘಟನೆಗಳನ್ನು ಚಿತ್ರಸಹಿತ ವಿವರಿಸಲಾಗಿದೆ. ಸುತ್ತಮುತ್ತಲಿನ ಜೀವವೈವಿಧ್ಯತೆಗಳು ಹಾಗೂ ವಿಸ್ಮಯಗಳನ್ನು ಬಿಡಿಬಿಡಿಯಾಗಿ ಓದುಗರಿಗೆ ತಲುಪಿಸುತ್ತವೆ. ಇಡೀ ಪ್ರಕೃತಿಯ ಸಮಸ್ತವನ್ನು ಸೂಕ್ಷ್ಮಮತಿಯಿಂದ ನೋಡುವ ತೇಜಸ್ವಿ ಅವರ ಸಂವೇದನಾಶೀಲತೆ ಇಲ್ಲಿ ವ್ಯಕ್ತವಾಗಿದೆ. ಅವರು ತೆಗೆದಿರುವ ಫೋಟೋ ಮತ್ತು ಸಣ್ಣ ಸಣ್ಣ ಲೇಖನಗಳು ಇಲ್ಲಿ ಸಮ್ಮಿಲನಗೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಫೋಟೋಗ್ರಫಿ ಮತ್ತು ಸಾಹಿತ್ಯದ ಅನುಸಂಧಾನವನ್ನು ಇಲ್ಲಿ ಕಾಣಬಹುದು. ಗಿಡ, ಮರ, ಬಳ್ಳಿ, ಬೆಟ್ಟಗುಡ್ಡ, ಜಲಪಾತಗಳು ಹಾಗೂ ಪ್ರಾಣಿ-ಪಕ್ಷಿ ಸಂಕುಲಗಳೆಲ್ಲವೂ ಪಾತ್ರಗಳಂತೆ ನಮ್ಮ ಕುತೂಹಲ ತಣಿಸುತ್ತವೆ.
©2025 Book Brahma Private Limited.