ಮಿಲನಿಯಮ್ ಸರಣಿ ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಎರಡನೆ ಪುಸ್ತಕ ’ಜೀವನ ಸಂಗ್ರಾಮ’. ಅಗ್ನಿಪರ್ವತ ಮತ್ತು ಜ್ವಾಲಾಮುಖಿ ಸ್ಫೋಟಗಳು, ಭೂಕಂಪಗಳು ಮತ್ತು ಇವುಗಳ ಪರಿಣಾಮ ಸಾಗರಗಳಿಂದ ನುಗ್ಗಿ ಬರುವ ದೈತ್ಯಾಕಾರದ ಟೈಡಲ್ ಅಲೆಗಳು (ತ್ಸುನಾಮಿ), ಭೀಕರ ಸುಂಟರಗಾಳಿ (ಟಾರ್ನೆಡೋ), ಕಾಳಿಚ್ಚು (ಎಲ್‌ನಿನೋ-ಮುಂತಾದ ಪ್ರಾಕೃತಿಕ ಶಕ್ತಿಗಳ ಸ್ವರೂಪವನ್ನು ಚಾರಿತ್ರಿಕ ಘಟನೆಗಳ ಮೂಲಕ ಈ ಪುಸ್ತಕ ಪರಿಚಯಿಸುತ್ತದೆ. ಹೆಮೇ, ಸಾಂಟರೋನಿಯಂಥ ದ್ವೀಪಗಳು ಜ್ವಾಲಾಮುಖಿ ಸ್ಫೋಟಗಳಿಂದ ಹೇಗೆ ಹೇಳಹೆಸರಿಲ್ಲದಂತಾದವು ಮತ್ತು ಥೆರೇಸಿಯ, ಸಿನೋಸ್, ಅಯೋಸ್ ಮುಂತಾದ ದ್ವೀಪಗಳು ಸಾಗರದ ನಡುವೆಯೇ ಹೇಗೆ ತಲೆಯೆತ್ತಿದವು ಎನ್ನುವುದನ್ನು ತಿಳಿಯಬಹುದು. ’ಜೀವನ ಸಂಗಾಮ' ಎಂಬ ಶೀರ್ಷಿಕೆ ಹೊತ್ತ ಈ ಪುಸ್ತಕ, ವಿನಾಶಕಾರಿ ಶಕ್ತಿಗಳ ನಡುವಿನ ಮಾನವ ಬದುಕನ್ನು ಚಿತ್ರಿಸುತ್ತದೆ.
©2025 Book Brahma Private Limited.