ಹಕ್ಕಿಪುಕ್ಕ (1997) ಕೃತಿಯು 191 ಪುಟಗಳಲ್ಲಿ 191 ಪಕ್ಷಿಗಳ ಪರಿಚಯ ಮಾಡಿಕೊಡುತ್ತದೆ. ಪ್ರತಿ ಪುಟದಲ್ಲಿಯೂ ಒಂದು ಹಕ್ಕಿಯ ವರ್ಣಚಿತ್ರ, ಅದರ ಗಾತ್ರ ರೂಪ, ಸ್ವಭಾವ, ತೆಗೆದುಕೊಳ್ಳುವ ಆಹಾರ, ಗೂಡು ಕಟ್ಟಿಕೊಳ್ಳುವ ರೀತಿ, ಸಂತಾನೋತ್ಪತ್ತಿ, ವಲಸೆ, ವಾಸಿಸುವ ಪ್ರಾದೇಶಿಕ ನಕ್ಷೆ. ಈ ಮೊದಲಾದ ಸಂಕ್ಷಿಪ್ತ ವಿವರಗಳಿವೆ. ಹಕ್ಕಿಗಳಿಗೆ ಜನಬಳಕೆಯ ಹೆಸರುಗಳನ್ನೆ ಕೊಟ್ಟಿದ್ದು, ಕೆಳಗೆ ಅವುಗಳ ಇಂಗ್ಲಿಷ್ ಹೆಸರನ್ನೂ ಕೊಡಲಾಗಿದೆ. ಇಂಗ್ಲಿಷಿನಲ್ಲಿ ಸಲೀಂ ಆಲಿಯವರ 'ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್ ಪುಸ್ತಕವಿದೆ. ಭಾರತೀಯ ಭಾಷೆಗಳಲ್ಲಿ ಇದು ಅಪರೂಪದ ಮಹತ್ವದ ಪುಸ್ತಕ.
©2024 Book Brahma Private Limited.