ಭಾರತೀಯ ಇತಿಹಾಸ ಲೇಖನದ ಚಿಂತನಾಗತಿಯನ್ನು ಬದಲಿಸಿದ ಇತಿಹಾಸಕಾರ ಡಿ.ಡಿ.ಕೊಸಾಂಬಿಯವರ ಅನನ್ಯ ಕೃತಿ Myth and Reality ಕನ್ನಡ ಅನುವಾದ. ನಾಗರಿಕತೆ ಆರಂಭವಾದಾಗಿನಿಂದಲೂ ಮೂಲೆಗುಂಪಾಗದೆ ಉಳಿದುಕೊಂಡ ಕೆಲವು ಭಾರತೀಯ myth (ಪುರಾಣ)ಗಳ ಮತ್ತು ವಿಧಿ ritual ಗಳ ಮೂಲವನ್ನು ಹುಡುಕುವುದು ಕೃತಿಯ ಉದ್ದೇಶ. ಇದರಲ್ಲಿ ಭಗವದ್ಗೀತೆ, ಊರ್ವಶಿ-ಪುರೂರವ ಪ್ರಸಂಗ ಮತ್ತು ಕೂಡುದಾರಿಯಲ್ಲಿ ಮಾತೃದೇವತೆಗಳ ನೆಲೆ ಎಂಬ ಮೂರು ಬರಹಗಳಿವೆ.
ಹೊಸತು-2004- ಮಾರ್ಚ್
ಭಾರತೀಯ ಇತಿಹಾಸ ತತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿ ಚರಿತ್ರೆಯನ್ನು ಅರ್ಥೈಸುವಲ್ಲಿ ಹೊಸದಿಕ್ಕು ತೋರಿದ ಶ್ರೇಷ್ಠ ವಿದ್ವಾಂಸರು ಶ್ರೀ ಡಿ. ಡಿ. ಕೊಸಾಂಬಿ ಚರಿತ್ರೆಯು ಹಾದುಹೋದ ಪ್ರತಿಹಂತದ ಗುರುತುಗಳನ್ನೂ ಎಚ್ಚರಿಕೆಯಿಂದ ವಿಶ್ಲೇಷಿಸುತ್ತ ಭಾರತೀಯ ಪುರಾಣಗಳ ಭೌತಿಕ ನೆಲೆಯನ್ನು ಶೋಧಿಸುವ ಅವರ ದೃಷ್ಟಿಕೋನ ಅನನ್ಯವಾಗಿದೆ. ಚರಿತ್ರೆ ಅಥವಾ ಅಲ್ಲಿ ಉಲ್ಲೇಖಿಸಲ್ಪಟ್ಟ ಸಮಾಜ ಕೇವಲ ಮೇಲ್ವರ್ಗ ಮತ್ತು ಆಳುವವರದ್ದು ಮಾತ್ರ ವಾಗಿರದೆ ಶ್ರೀಸಾಮಾನ್ಯನೂ ಅದರಲ್ಲಿ ಸೇರಿರುತ್ತಾನೆಂಬ ಸತ್ಯದ ಅರಿವು ಮೂಡಿಸುತ್ತದೆ.
©2024 Book Brahma Private Limited.