ಮಕ್ಕಳ ರಂಗ ತೋರಣ

Author : ಎ.ಎಸ್. ನದಾಫ್

Pages 64

₹ 40.00




Year of Publication: 2018
Published by: ಕಲ್ಮೇಶ್ವರ ಪ್ರಕಾಶನ
Address: ಕಲ್ಲೂರು, ತಾ:ಗದಗ, ಜಿ: ಗದಗ-
Phone: 9632570869

Synopsys

ರಂಗಾಸಕ್ತ ಎ.ಎಸ್. ನದಾಫ್ ಅವರು ಬರೆದ ನಾಟಕಗಳ ಸಂಕಲನ-ಮಕ್ಕಳ ರಂಗ ತೋರಣ. ಮಾತೃ ಹೃದಯ, ನಿಸರ್ಗ ರಹಸ್ಯ, ಗಾಳಿಪಟ ಮತ್ತು ಬಾಲಂಗೋಸಿ ಹೀಗೆ ವಸ್ತು ವೈವಿಧ್ಯತೆಯ ಒಟ್ಟು 12 ಏಕಾಂಕ ನಾಟಕಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬಿ.ಎಂ. ಹರಪನಹಳ್ಳಿ ‘ನಾಟಕಗಳ ಪಾತ್ರಗಳೂ ಕಡಿಮೆ, ಅವಧಿಯೂ ಕಡಿಮೆ, ಪಾತ್ರಗಳ ಸಂಭಾಷಣೆಯಿಂದ ನಾಟಕದ ಮೂಲ ಉದ್ದೇಶವನ್ನು ಪ್ರಕಟಿಸುತ್ತಾ ಸಾಗುವುದು ಇಲ್ಲಿಯ ತಂತ್ರ. ಮಕ್ಕಳ ಸೂಕ್ಷ್ಮ ಮನಸ್ಸಿಗೆ ತಿಳಿಯುವ ಹಾಗೆ ಮತ್ತು ವಿಷಯವಸ್ತುವನ್ನು ಅವರು ಸಂಭ್ರಮಿಸುವ ಹಾಗೆ ಸರಳವಾಗಿ ನಾಟಕಗಳ ವಸ್ತು ನಿರೂಪಿತವಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎ.ಎಸ್. ನದಾಫ್

‌ಎ.ಎಸ್. ನದಾಫ್ (ಅಲ್ಲಾಸಾಬ್ ನದಾಫ್) ಅವರು ಗದಗ ಜಿಲ್ಲೆಯ ಚಿಂಚಿಲಿ-ಕಲ್ಲೂರು ಗ್ರಾಮದವರು. ಹಿಂದಿ ಭಾಷಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಬುದ್ಧ ನಡೆದ ದಾರಿ-ಕವನ ಸಂಕಲನ. ರಂಗಭೂಮಿ ಇವರ ಆಸಕ್ತಿಯ ಕ್ಷೇತ್ರ. ಗಾಳಿಪಟ ಮತ್ತು ಬಾಲಂಗೋಸಿ, ಜುಂ ಜುಂ ಸ್ವಾಮೀಜಿ, ಮಕ್ಕಳ ರಂಗ ಕುಸುಮ, ಬದುಕಿನ ಬೆಲೆ, ಕಾಗೆ ಮತ್ತು ಗೀಜುಗ, ಮಾತೃಹೃದಯ, ಅದ್ಭುತ ಶಕ್ತಿ, ಸಿಂಧೂರ ತಿಲಕ, ನಿಸರ್ಗ ರಹಸ್ಯ ಹೀಗೆ ಒಟ್ಟು 12 ರಂಗ ಕಿರು ನಾಟಕಗಳನ್ನು ಸೇರಿಸಿ ಮಕ್ಕಳ ರಂಗ ತೋರಣ ಎಂಬ ಏಕಾಂಕ ನಾಟಕಗಳ ಕೃತಿಯನ್ನುಪ್ರಕಟಿಸಿದ್ದಾರೆ. ನಾಟಕಗಳು ವಸ್ತು ವೈವಿಧ್ಯತೆಯಿಂದ ಕೂಡಿವೆ.  ...

READ MORE

Related Books