ಮಹಿಳಾ ಚಳುವಳಿಯ ಮಜಲುಗಳು

Author : ಜಿ. ರಾಮಕೃಷ್ಣ

₹ 35.00




Published by: ನವಕರ್ನಾಟಕ ಪ್ರಕಾಶನ
Address: # 11 ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,, ಕುಮಾರಪಾರ್ಕ್ ಪೂರ್ವ, ಬೆಂಗಳೂರು - 560 001
Phone: 08030578020/22

Synopsys

‘ಮಹಿಳಾ ಚಳುವಳಿಯ ಮಜಲುಗಳು’ ನವಕರ್ನಾಟಕದ ಸುವರ್ಣೋತ್ಸವ ಮಾಲಿಕೆಯಡಿ ಪ್ರಕಟಿಸಿದ ಕೃತಿ. ಹಿರಿಯ ಲೇಖಕ ಜಿ. ರಾಮಕೃಷ್ಣ ಪ್ರಧಾನ ಸಂಪಾದಕರು. ಎನ್. ಗಾಯತ್ರಿ ಸಂಪಾದಕಿ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಭಾರತದ ಸ್ವಾತಂತ್ಯ್ರ ಚಳುವಳಿಯ ಒಡಲಲ್ಲಿ ಜನಿಸಿದ ಮಹಿಳಾ ಚಳುವಳಿಗೆ ಸುಮಾರು ಒಂದು ಶತಮಾನದ ದೀರ್ಘ ಇತಿಹಾಸವಿದೆ. ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಹುಟ್ಟಿದ ಮಹಿಳಾ ಚಳುವಳಿ ನವ ವಸಾಹತುಶಾಹಿಯ ಯುಗದವರೆಗೂ ಹಾದು ಬಂದ ವಿವಿಧ ಮಜಲುಗಳ ಸ್ಥೂಲ ಪರಿಚಯ ಇಲ್ಲಿದೆ. ಚರಿತ್ರೆಯಲ್ಲಿ ದಾಖಲಾಗಿರುವ ಹೆಣ್ಣಿನ ಜೀವನ ಮತ್ತು ಬದುಕನ್ನು ಹಾಗೂ ಅವಳು ನಿರ್ವಹಿಸಿದ, ಭಾಗವಹಿಸಿದ ಚಳುವಳಿಯನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಪ್ರಯತ್ನ ಇಲ್ಲಿಯದು. ಪುರುಷ ನೇತೃತ್ವದ ಸಾಮಾಜಿಕ ಚಳುವಳಿಗಳಾದ ಗಾಂಧಿ ಚಳುವಳಿ, ಗ್ರಾಮೀಣ ಚಳುವಳಿಗಳಾದ ತೇಭಾಗ, ತೆಲಂಗಾಣ, ಪುನ್ನಪ್ರ, ವಯಲಾರ್ ದ್ರಾವಿಡ ಚಳುವಳಿಗಳಲ್ಲಿ ಮಹಿಳೆಯ ಪಾತ್ರದ ಸೋಲು-ಗೆಲುವುಗಳನ್ನು ಕುರಿತ ಚರ್ಚೆ ಈ ಕೃತಿಯು ಒಳಗೊಂಡಿದೆ.

 

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Related Books