ಮಹಿಳಾ ಅಸಮಾನತೆ

Author : ಹೆಚ್. ಎನ್. ನಾಗಮೋಹನದಾಸ್

Pages 150

₹ 100.00




Published by: ಚಿಂತನ ಪುಸ್ತಕ
Address: ಬೆಂಗಳೂರು
Phone: 90360 82005

Synopsys

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇದು ಇತ್ತೀಚೆಗೆ ಸಾರ್ವಜನಿಕ ಚರ್ಚೆಯ ರೂಪವನ್ನು ಪಡೆದಿದೆ. ಈ ಚರ್ಚೆಯ ಭರದಲ್ಲಿ ಕುಟುಂಬದೊಳಗೆ ಮಹಿಳೆಯರು ಬೇರೆ ಬೇರೆ ರೂಪಗಳಲ್ಲಿ ಎದುರಿಸುತ್ತಿರುವ ದೌರ್ಜನ್ಯ, ಶೋಷಣೆಗಳು ಬದಿಗೆ ಸರಿದಿವೆ. ಮಹಿಳೆಯ ಮೇಲಿನ ದೌರ್ಜನ್ಯದ ಮೇಲ್ಮುಖ ಚರ್ಚೆಗಳು ನಡೆಯುತ್ತವೆಯೇ ಹೊರತು, ಅದರ ತಾಯಿ ಬೇರನ್ನು ಗುರುತಿಸಿ ನಿವಾರಿಸುವ ಕೆಲಸ ನಡೆಯುತ್ತಿಲ್ಲ. ಈ ಕೃತಿ ಮಹಿಳೆಯ ಮೇಲೆ ಬೇರೆ ಬೇರೆ ಕ್ಷೇತ್ರಗಳಲ್ಲಿ, ಸಂದರ್ಭಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ಅಧ್ಯಯನಾತ್ಮಕವಾಗಿ ವಿಶ್ಲೇಷಿಸುತ್ತದೆ. ಅಸಮಾನತೆಯ ಮೂಲವನ್ನು ಹುಡುಕಿಕೊಂಡು ಹೋಗುವ ಕೃತಿ, ಹೆಣ್ಣಿನ ಮೂಲಕ ಜೀವ ಪಡೆದ ಇತಿಹಾಸದ ಬೇರುಗಳನ್ನು ಅರಸಿಕೊಂಡು ಹೋಗುತ್ತದೆ. ಈಜಿಪ್ ಟಿನಿಂದ ಹಿಡಿದು, ಪಾಕಿಸ್ತಾನದ ಮಾಂಟೆಗೊಮರಿ, ಗ್ರೀಕ್ ನಾಗರಿಕತೆ, ರೋಮನ್ ನಾಗರಿಕತೆ ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಮಹಿಳೆಯ ಅಸಮಾನತೆ ರೂಪು ಪಡೆದದ್ದು ಮತ್ತು ಅಂದು ಒಂದೇ ಧಾರೆಯಾಗಿ ಕೂಡಿಕೊಂಡ ಕತೆಯನ್ನು ಇತಿಹಾಸದ ದಾಖಲೆಗಳ ಜೊತೆಗೆ ಇಡುತ್ತದೆ. ಈ ಕೃತಿ, ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಬೇರೆ ಬೇರೆ ಧರ್ಮಗಳು ಕಂಡ ರೀತಿ, ಬೇರೆ ಬೇರೆ ದೇಶಗಳ ಕಾನೂನುಗಳು ಕಂಡ ರೀತಿಗಳು ಇಲ್ಲಿ ಚರ್ಚೆಗೊಳಗಾಗುತ್ತವೆ. ಹಾಗೆಯೇ ಬೇರೆ ಬೇರೆ ದೇಶಗಳಲ್ಲಿ ಮಹಿಳಾ ಚಳವಳಿ ಹೇಗೆ ಬೆಳೆಯಿತು ಎಂಬುದರ ಕುರಿತು ವಿವರಗಳನ್ನು ಈ ಕೃತಿಯೂ ವಿವರಿಸುತ್ತದೆ.

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books