ಕೆಳವರ್ಗದ ಪ್ರತಿಭಟನೆ ಸಬಾಲ್ಟರ್ನ್ ಚರಿತ್ರೆ

Author : ತಂಬಂಡ ವಿಜಯ್ ಪೂಣಚ್ಚ

Pages 88

₹ 60.00




Year of Publication: 2009
Published by: ಪ್ರಸರಾಂಗ, ಹಂಪಿ ವಿಶ್ವವಿದ್ಯಾಲಯ
Address: ಪ್ರಸರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ - 583276
Phone: 8394241337

Synopsys

ಡಾ. ವಿಜಯ್ ಪೂಣಚ್ಚ ತಂಬಂಡ ಅವರು ರಚಿಸಿರುವ ’ಕೆಳವರ್ಗದ ಪ್ರತಿಭಟನೆ ಸಬಾಲ್ಟರ್ನ್ ಚರಿತ್ರೆ ’ ಪುಸ್ತಕವು ಕೆಳವರ್ಗದ ಸಂವೇದನೆ ಮತ್ತು ಪ್ರತಿಭಟನೆಗಳನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಚರಿತ್ರೆಯ ಕ್ರಮವನ್ನು ಪರಿಚಯಿಸುತ್ತದೆ.

ದಕ್ಷಿಣ ಏಷಿಯಾದಲ್ಲಿ ಸಬಾಲ್ಟರ್ನ್ ಅಧ್ಯಯನದ ಹುಟ್ಟು ಮತ್ತು ವಿಕಾಸದ ಕುರಿತು ಪರಿಚಯಿಸುವ ಬರಹಗಳು ಮತ್ತು ಸಬಾಲ್ಟರ್ನ್ ಅಧ್ಯಯನ ಕ್ರಮದ ಮೇಲಿನ ಕೆಲವು ವಿಮರ್ಶೆಗಳ ಬಗ್ಗೆ, ಮತ್ತು ಆಂಟೋನಿಯೋ ಗ್ರಾಂಸಿ ಜೀವನ, ರಾಜಕೀಯ ಮತ್ತು ಸಿದ್ದಾಂತಗಳ ಬಗ್ಗೆಯೂ ಒಳನೋಟಗಳ ವಿವರಣೆಗಳನ್ನು ನೀಡುತ್ತದೆ. 

ಭಾರತದ ಬಹುಸಂಖ್ಯಾತ ರೈತರ, ಜನಸಾಮಾನ್ಯರ ಸಂವೇದನೆ ಮತ್ತು ಪ್ರತಿಭಟನೆಗಳು ಯುರೋಪಿಯನ್ ಕೇಂದ್ರಿತ ವಿದ್ವತ್ ವಲಯಗಳು ರೂಪಿಸಿದ ಬೌದ್ಧಿಕತೆಗೆ ಅಥವಾ ಸಿದ್ಧಾಂತಗಳಿಗೆ ಸಾಧ್ಯವಾಗಿಲ್ಲ ಎಂಬುದನ್ನು ಸಬಾಲ್ಟರ್ನ್ ಅಧ್ಯಯನವು ನಿರೂಪಿಸುತ್ತದೆ. 

About the Author

ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books