ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ

Author : ಹೇಮಾ ಪಟ್ಟಣಶೆಟ್ಟಿ

Pages 220

₹ 150.00




Year of Publication: 2005
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕನ್ನಡ ನಾಟಕದಲ್ಲಿನ ಸ್ತ್ರೀ  ಪಾತ್ರಗಳ, ಸಂಬಂಧಿತ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸದೇ ಉಳಿದು ಹೋದಂತಹ ಅಂಶಗಳ ಬಗ್ಗೆ ಗಹನವಾಗಿ ಯೋಚಿಸಿ ಹೊರತಂದಿರುವ ಅಪೂರ್ವ ಕೃತಿ 'ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ'. ಕನ್ನಡ ನಾಟಕಗಳಲ್ಲಿನ ಪ್ರಾತಿನಿಧಿಕ ಸ್ತ್ರೀ ಪಾತ್ರಗಳ ವಿವರಣೆ, ಮತ್ತು ವಿಶ್ಲೇಷಣೆಯನ್ನು ಅವಲೋಕಿಸಿರುವಂತಹ ಅಧ್ಯಯನ ಇದು.

ಸ್ತ್ರೀವಾದದ ಹಿನ್ನೆಲೆಯಲ್ಲಿ ಕಂಡುಬಂದ ಪ್ರಾರಂಭದ ನಾಟಕಗಳಿಂದ ಹಿಡಿದು ಆಧುನಿಕ ಕನ್ನಡ ನಾಟಕಗಳ ವಿಮರ್ಶೆಯ ತನಕವೂ ಗಂಭೀರವಾಗಿ ಅಧ್ಯಯನ ನಡೆಸಿ, ಕನ್ನಡದ ಎಲ್ಲಾ ನಾಟಕಕಾರರ ಮತ್ತು ಪ್ರಮುಖ ಬರಹಗಾರರ ಲೇಖನಗಳನ್ನು ಸ್ತ್ರೀ ಪ್ರಪಂಚಕ್ಕೆ ಮುಖಾಮುಖಿಯಾಗಿಸಿದ್ದಾರೆ ಲೇಖಕಿ ಹೇಮಾ ಪಟ್ಟಣಶೆಟ್ಟಿ.

About the Author

ಹೇಮಾ ಪಟ್ಟಣಶೆಟ್ಟಿ
(10 February 1954)

ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.  ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...

READ MORE

Related Books