ಕಾಡದಿಬ್ಬದಲಿ ಪಾಠ ಕಲಿತ ಕಳ್ಳರು

Author : ಬಾಗೂರು ಮಾರ್ಕಾಂಡೇಯ

Pages 96

₹ 80.00




Year of Publication: 2007
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಕಾಡದಿಬ್ಬದಲಿ ಪಾಠ ಕಲಿತ ಕಳ್ಳರು- ಈ ನಾಟಕವನ್ನು ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದಿದ್ದಾರೆ. ಕಾಡಿನಲ್ಲಿ ಪ್ರಾಣಿಗಳು ತಮ್ಮ ಪಾಡಿಗೆ ತಾವಿದ್ದು ಪ್ರಕೃತಿಯಲ್ಲಿ ಆನಂದವಾಗಿರುತ್ತವೆ ಮನುಷ್ಯ ಸ್ವಾರ್ಥಿಯಾಗಿ ಅನ್ಯರದ್ದೇ ಬಾಚಿ ತಿನ್ನಲು ಯೋಚಿಸುತ್ತಾನೆ. ಕೆಟ್ಟವನಾಗುತ್ತಾನೆ. ದ್ರೋಹಿಯಾಗುತ್ತಾನೆ. ಹೀಗೆ ಕಳ್ಳರು ಕಾಡಿನಲ್ಲಿ ಹೋಗಿ ಪರಿವರ್ತನೆಯಾಗುವ ಕತೆಯಾಗಿದ್ದು ಮಕ್ಕಳಿಗೆ ಅಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ. ಪ್ರಾಣಿ ಪಕ್ಷಿಗಳು ಮಾತನಾಡುತ್ತವೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುತೂಹಲ ಅಂಥದೊಂದು ಕುತೂಹಲವನ್ನು ಈ ನಾಟಕದಲ್ಲಿ ಅಳವಡಿಸಿ ಬರೆದು ಅದಕ್ಕೊಪ್ಪುವ ಚಿತ್ರಗಳನ್ನು ಸ್ವತಃ ಲೇಖಕರೇ ಚಿತ್ರ ವಿನ್ಯಾಸ ಮಾಡಿದ್ದು ವಿಶೇಷ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books